ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಚಿತ್ತಾರ...

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ದೇಶದ ಪ್ರತಿಷ್ಠಿತ ಹಾಗೂ ಸಕ್ರಿಯ ಫೋಟೊಗ್ರಾಫಿಕ್‌ ಕ್ಲಬ್‌ಗಳಲ್ಲಿ ನಗರದ ಯೂತ್‌ ಫೋಟೊಗ್ರಾಫಿಕ್‌ ಸೊಸೈಟಿಯೂ ಒಂದು.

ಛಾಯಾಗ್ರಹಣವನ್ನು ಹವ್ಯಾಸ ಮಾಡಿಕೊಂಡವರಿಗೆ ಹಾಗೂ ಆಸಕ್ತಿ ಉಳ್ಳವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಆರಂಭವಾಗಿರುವ ಈ ಸಂಸ್ಥೆಗೆ ಈಗ 47ರ ಹರೆಯ. ಸೊಸೈಟಿಯು ಪ್ರತಿವರ್ಷ ರಾಷ್ಟ್ರಮಟ್ಟದ ಫೋಟೊಗ್ರಫಿ ಸ್ಪರ್ಧೆ ಹಾಗೂ ಪ್ರದರ್ಶನ ನಡೆಸುತ್ತಿದೆ. ಶನಿವಾರ (ಜ.13) ‘ಯೂತ್‌ ಫೋಟೊಗ್ರಫಿಕ್‌ ಸೊಸೈಟಿ ಪೋಟೊಗ್ರಫಿ ಸಲಾನ್‌ ಪ್ರದರ್ಶನ ಹಾಗೂ ಬಹುಮಾನ ವಿತರಣೆ’ ಕಾರ್ಯಕ್ರಮ ನಡೆಯಲಿದೆ.

(ಕಲರ್‌ ಓಪನ್‌ ಸೆಕ್ಷನ್‌ನಲ್ಲಿ ‌ಪ್ರಥಮ  ಬಹುಮಾನ ಪಡೆದ ಠಾಣೆಯ ರಾಕೇಶ್‌ ರಾವಲ್‌ ಅವರು ಕ್ಲಿಕ್ಕಿಸಿದ ಚಿತ್ರ)

ಸೊಸೈಟಿಯು ಪ್ರತಿವರ್ಷ ಕಲರ್‌ ಓಪನ್‌, ಬ್ಲಾಕ್‌ ಆ್ಯಂಡ್‌ ವೈಟ್‌, ನೇಚರ್‌, ಫೋಟೊ ಟ್ರಾವೆಲ್‌ ಎಂಬ ನಾಲ್ಕು ವಿಭಾಗಗಳಲ್ಲಿ ಛಾಯಾಗ್ರಹಣ ಸ್ಪರ್ಧೆ ನಡೆಸುತ್ತದೆ. ಈ ನಾಲ್ಕೂ ವಿಭಾಗಗಳಲ್ಲಿ ದ್ವಿತೀಯ ಹಾಗೂ ತೃತೀಯ ಬಹುಮಾನಗಳೂ ಇರುತ್ತವೆ.

ಅಗಸ್ಟ್‌ ತಿಂಗಳಲ್ಲಿ ‘ಫೆಡರೇಷನ್‌ ಆಫ್‌ ಇಂಡಿಯನ್‌ ಪೋಟೊಗ್ರಫಿ’ ಮೂಲಕ ಈ ಸ್ಪರ್ಧೆ ಬಗ್ಗೆ ಮಾಹಿತಿ ನೀಡಲಾಗಿತ್ತು. ದೇಶದ ಸುಮಾರು 2000ಕ್ಕೂ ಹೆಚ್ಚು ಛಾಯಾ ಗ್ರಾಹಕರು ಈ ಸ್ಪರ್ಧೆಗೆ ತಾವು ಕ್ಲಿಕ್ಕಿಸಿದ ಫೋಟೊಗಳನ್ನು ಕಳುಹಿಸಿದ್ದರು.

(ನೇಚರ್‌ ಫೋಟೊಗ್ರಫಿ ವಿಭಾಗದಲ್ಲಿ ಮೊದಲ  ಬಹುಮಾನ ಪಡೆದ ನಗರದ ಅರ್ಜುನ್‌ ಹರಿತ್‌ ಅವರು ಕ್ಲಿಕ್ಕಿಸಿದ ಚಿತ್ರ)

ಡಾ.ಬಿ.ಕೆ. ಸಿನ್ಹಾ, ಬೂಪೇಶ್‌ ಲಿಟ್ಲ್‌, ಎಚ್‌.ಐ. ಪ್ರವೀಣ್‌ಕುಮಾರ್‌, ದಿನೇಶ್‌ ಕುಂಬ್ಳೆ, ಎ.ಜಿ. ಲಕ್ಷ್ಮೀನಾರಾಯಣ, ಪ್ರಸನ್ನ, ವೆಂಕಟೇಶ್‌ ಗುಬ್ಬಿ ಅವರು ತೀರ್ಪುಗಾರರಾಗಿದ್ದರು.

‘ಚಿತ್ರದ ಆಯ್ಕೆ ಸಂದರ್ಭದಲ್ಲಿ ಫೋಟೊ ಕಾಂಪೋಸಿಷನ್‌, ಕ್ಯಾಪ್ಚರ್ ಎಮೋಷನ್‌, ಚಿತ್ರದ ಕತೆ, ಐಕಾನಿಕ್‌ ಮೂಮೆಂಟ್‌... ಹೀಗೆ ಹಲವು ಅಂಶಗಳನ್ನು ಮುಖ್ಯವಾಗಿ ಗಮನಿಸಲಾಯಿತು. ಬೇರೆಬೇರೆ ಪ್ರಶಸ್ತಿಗಳಿಗೆ ಸುಮಾರು 65 ಪೋಟೊಗಳು ಆಯ್ಕೆಯಾಗಿವೆ’ ಎಂದು ಯೂತ್‌ ಪೋಟೊಗ್ರಾಫಿಕ್‌ ಸೊಸೈಟಿ ಅಧ್ಯಕ್ಷ ಎಚ್‌.ಸತೀಶ್‌ ಪ್ರತಿಕ್ರಿಯಿಸಿದರು.

(ಟ್ರಾವೆಲ್‌ ವಿಭಾಗದಲ್ಲಿ ದ್ವಿತೀಯ ಬಹುಮಾನ ಕೋಲ್ಕತ್ತದ ಜೋಯ್‌ರಾಜ್‌ ಸಮಂತಾ ಅವರು ಕ್ಲಿಕ್ಕಿಸಿದ ಚಿತ್ರ)

ಪ್ರಶಸ್ತಿಗೆ ಆಯ್ಕೆಯಾಗದಿದ್ದರೂ ಸ್ಪರ್ಧೆಗೆ ಬಂದಿದ್ದ ಉತ್ತಮ ಗುಣಮಟ್ಟದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. 

‘ಈ ವರ್ಷದ ಸ್ಪರ್ಧೆಯ ವಿಶೇಷವೆಂದರೆ ಯುವಜನರರನ್ನು ಛಾಯಾಗ್ರಹಣದ ಕಡೆಗೆ ಸೆಳೆಯುವ ಉದ್ದೇಶದಿಂದ 18 ವರ್ಷದೊಳಗಿನ ಎಲ್ಲಾ ಸ್ಪರ್ಧಿಗಳಿಗೆ ಸ್ಪರ್ಧೆಗೆ ಪ್ರವೇಶ ಉಚಿತ ನೀಡಲಾಗಿತ್ತು. ಅಲ್ಲದೇ ಈ ವರ್ಷ ಯೂತ್‌ ಫೋಟೊಗ್ರಫಿಕ್‌ ಸೊಸೈಟಿಯಲ್ಲಿ 18 ವರ್ಷದೊಳಗಿನವರು ಸದಸ್ಯತ್ವ ಪಡೆಯಲು ಇಚ್ಛಿಸಿದಲ್ಲಿ ಅವರಿಗೆ ಪೂರ್ತಿ ಶುಲ್ಕ ವಿನಾಯಿತಿ ನೀಡಲಾಗುವುದು’ ಎಂದು ಸತೀಶ್‌ ಮಾಹಿತಿ ನೀಡಿದರು. salon.ypsbengaluru.com/results.php ಜಾಲತಾಣದ ಮೂಲಕ ಬಹುಮಾನ ವಿಜೇತ ಚಿತ್ರಗಳನ್ನು ನೋಡಬಹುದು.

(ಸತೀಶ್‌)

ಯೂತ್‌ ಫೋಟೊಗ್ರಫಿಕ್‌ ಸೊಸೈಟಿಯ 35ನೇ ಅಖಿಲ ಭಾರತ ಫೋಟೊಗ್ರಫಿ ಸಲಾನ್‌ ಪ್ರದರ್ಶನ ಹಾಗೂ ಬಹುಮಾನ ವಿತರಣೆ: ಅತಿಥಿ– ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್‌ ಅಗರ್‌ವಾಲ್, ಹಿರಿಯ ಚಿತ್ರನಟ ಎಸ್‌.ಶಿವರಾಂ. ಸ್ಥಳ– ಕರ್ನಾಟಕ ಚಿತ್ರಕಲಾ ಪರಿಷತ್‌, ಕುಮಾರಕೃಪಾ ರಸ್ತೆ. ಶನಿವಾರ ಸಂಜೆ 5. ಭಾನುವಾರ ಸಂಜೆ 6 ಗಂಟೆ ತನಕ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಭಾನುವಾರ ಬೆಳಿಗ್ಗೆ 11ಕ್ಕೆ ಧೀರಜ್‌ ಎಂ.ನಂದಾ ಅವರಿಂದ ‘ಅಂಡರ್‌ವಾಟರ್ ಫೋಟೊಗ್ರಫಿ’ ಹಾಗೂ 2.30ಕ್ಕೆ ಕಿರಣ್‌ ಪೂಣಚ್ಚ ಅವರಿಂದ ಭಾರತದ ‘ರ‍್ಯಾಪ್ಟರ್ಸ್‌ ಆಫ್ ಇಂಡಿಯಾ’ ಛಾಯಾಗ್ರಹಣ ಪ್ರಾತ್ಯಕ್ಷಿಕೆಗಳು ಪ್ರದರ್ಶನ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT