ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗೆ ಬೆಳೆಯಲಿ ಬೆಂಡೆ

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಡೆಕಾಯಿ ಅಥವಾ ಲೇಡಿಸ್ ಫಿಂಗರ್ ಭಾರತದಲ್ಲಿ ಸಿಗುವ ಮುಖ್ಯ ತರಕಾರಿಗಳಲ್ಲಿ ಒಂದು. ಇದನ್ನು ಹೆಚ್ಚಾಗಿ ಉಷ್ಣವಲಯದ ಪ್ರದೇಶದಲ್ಲಿ ಬೆಳೆಯುತ್ತಾರೆ. ಇದು 22ರಿಂದ 33 ಡಿಗ್ರಿ ಸೆಲಿಯೆಸ್ಸ್ ಉಷ್ಣಾಂಶದಲ್ಲಿ ಚೆನ್ನಾಗಿ ಬೆಳೆಯಬಲ್ಲ ಗಿಡವಾಗಿದೆ. ಇದಕ್ಕೆ ಮಳೆನೀರು ಬಿದ್ದರೆ ಗಿಡ ತುಂಬಾ ಚೆನ್ನಾಗಿ ಬೆಳೆಯುತ್ತದೆ.

ಬೆಂಡೆಕಾಯಿ ಬೆಳೆಯಲು ಸೂಕ್ತ ಮಣ್ಣು: ಬೆಂಡೆಕಾಯಿ ಎಲ್ಲಾ ರೀತಿಯ ಮಣ್ಣಿನಲ್ಲೂ ಬೆಳೆಯುತ್ತದೆ. ಆದರೆ ಸಾಮಾನ್ಯವಾಗಿ ಮರಳು ಹಾಗೂ ಜೇಡಿ ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಮಣ್ಣಿನಲ್ಲಿ ಪಿಎಚ್‌ ಮಟ್ಟ 6ರಿಂದ 6.8 ರಷ್ಟು ಇರಬೇಕು. ಬೆಂಡೆಕಾಯಿ ಬೆಳೆಯುವ ಮೊದಲು ಮಣ್ಣನ್ನು ಪರಿಶೀಲಿಸಿಕೊಳ್ಳಬೇಕು, ಜೊತೆಗೆ ನೀರನ್ನು ಹೀರುವ ಅಂಶ ಇದರಲ್ಲಿ ಹೆಚ್ಚಿರಬೇಕು.

ಭೂಮಿಯ ತಯಾರಿ ಹೀಗಿರಲಿ: ಬೆಂಡೆಕಾಯಿ ಬೆಳೆಯುವ ಮೊದಲು ಭೂಮಿಯನ್ನು ಅಥವಾ ಮಣ್ಣನ್ನು ಚೆನ್ನಾಗಿ ಹದ ಮಾಡಿಟ್ಟುಕೊಳ್ಳಬೇಕು. ಮಣ್ಣನ್ನು ಹದ ಮಾಡಿಕೊಳ್ಳುವಾಗಲೇ ಡೀಕಂಪೂಸ್ ಮಾಡಿಕೊಳ್ಳಬೇಕು. ಇಳುವರಿ ಹೆಚ್ಚಿಸಲು ಬೇವಿನ ಕೇಕ್ ಹಾಗೂ ಕೋಳಿ ಗೊಬ್ಬರವನ್ನು ಮಣ್ಣಿನೊಂದಿಗೆ ಸೇರಿಸಬೇಕು. ಇದರಿಂದ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಬಹುದು.

ಬೆಂಡೆ ಬೆಳೆಯಲು ಸೂಕ್ತ ಸಮಯ: ಜನವರಿಯಿಂದ ಮಾರ್ಚ್ ಮತ್ತು ಜೂನ್‌ನಿಂದ ಆಗಸ್ಟ್‌ವರೆಗೆ ಬೆಳೆಯಬಹುದು. ಆಯಾಯ ಪ್ರದೇಶಗಳಿಗೆ ಅನುಗುಣವಾಗಿ ಇತರ ಪ್ರದೇಶದಲ್ಲಿ ಬೆಳೆಯಲು ಸೂಕ್ತ.

ಪಾಟ್‌ನಲ್ಲಿ ಬೆಂಡೆಕಾಯಿ ಹೀಗೆ ಬೆಳೆಯಿರಿ: ಒಂದು ಉದ್ದ ಹಾಗೂ ಅಗಲ ಬಾಯಿಯ ಪಾಟ್ ತೆಗೆದುಕೊಳ್ಳಿ. ಅದರಲ್ಲಿ ಗೊಬ್ಬರ ಸೇರಿಸಿದ ಮಣ್ಣನ್ನು ಹಾಕಿ, ಅದರಲ್ಲಿ ನಾಲ್ಕು ಬೆಂಡೆಕಾಯಿ ಬೀಜಗಳನ್ನು ಊರಿ, ದಿನದಲ್ಲಿ ಎರಡು ಬಾರಿ ನೀರು ಚಿಮುಕಿಸುತ್ತಿರಿ. 5ನೇ ದಿನಕ್ಕೆ ನಿಧಾನಕ್ಕೆ ಮೊಳಗೆ ಬರಲು ಆರಂಭಿಸುತ್ತದೆ. ಗಿಡ ಉದ್ದಕ್ಕೆ ನೀಟಾಗಿ ಬೆಳೆಯಲು ಚಿಕ್ಕ ಕಡ್ಡಿಯನ್ನು ಗಿಡ್ಡದ ಪಕ್ಕದಲ್ಲಿ ಊರಿ ಗಿಡವನ್ನು ದಾರದಿಂದ ಗಿಡಕ್ಕೆ ಪೆಟ್ಟಾಗದಂತೆ ಕಟ್ಟಿ ಇಡಿ.

ಗಿಡ ಸ್ವಲ್ಪ ಎತ್ತರಕ್ಕೆ ಬೆಳೆದ ನಂತರ 3ವಾರಗಳಿಗೊಮ್ಮೆ ದ್ರವರೂಪದ ರಾಸಾಯನಿಕ ಗೊಬ್ಬರವನ್ನು ಚಿಮುಕಿಸುತ್ತಿರಿ. ಗಿಡವನ್ನು ಚೆನ್ನಾಗಿ ಬಿಸಿಲು ಬೀಳುವ ಪ್ರದೇಶದಲ್ಲಿ ಇಡಿ. ಇದರಿಂದ ಬೆಂಡೆಕಾಯಿ ಸೊಗಸಾಗಿ ಬೆಳೆಯುತ್ತದೆ.

ಮನೆಯ ಮಹಡಿ ಅಥವಾ ಪಾಟ್ ಇರಿಸಿದ ಕಡೆ ಇಲಿ ಕಾಟವಿದ್ದರೆ ಪಾಟ್‌ ಪಾಟ್‌ನ ಸುತ್ತ ಸೀರೆ ಅಥವಾ ಬಟ್ಟೆಯಿಂದ ಬೇಲಿ ರಚಿಸಿ, ಇಲ್ಲದಿದ್ದರೆ ಅವುಗಳು ಬುಡದಿಂದ ಗಿಡವನ್ನು ಕತ್ತರಿಸುತ್ತವೆ.

ಮನೆಯಲ್ಲಿಯೇ ತಯಾರಿಸಿದ ಸಾವಯವ ಗೊಬ್ಬರಗಳನ್ನು ಹಾಕುವುದರಿಂದ ಕ್ರಿಮಿ– ಕೀಟಗಳಿಂದ ಗಿಡವನ್ನು ರಕ್ಷಿಸಬಹುದು. ಜೊತೆಗೆ ಗಿಡ ಹುಲುಸಾಗಿ ಬೆಳೆಯಲು ಇದು ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT