ಭಾರತ ಸಂಜಾತನಿಗೆ ಗಲ್ಲು: ದಿನ ನಿಗದಿ

7

ಭಾರತ ಸಂಜಾತನಿಗೆ ಗಲ್ಲು: ದಿನ ನಿಗದಿ

Published:
Updated:
ಭಾರತ ಸಂಜಾತನಿಗೆ ಗಲ್ಲು: ದಿನ ನಿಗದಿ

ವಾಷಿಂಗ್ಟನ್‌ : ವೃದ್ಧೆ ಮತ್ತು ಅವರ 10 ತಿಂಗಳ ಮೊಮ್ಮಗಳನ್ನು ಹಣಕ್ಕಾಗಿ ಹತ್ಯೆ ಮಾಡಿದ್ದ ಭಾರತ ಸಂಜಾತ ಅಮೆರಿಕದ ಯುವಕನನ್ನು ಮುಂದಿನ ತಿಂಗಳು ಇಲ್ಲಿ ಗಲ್ಲಿಗೇರಿಸಲು ನಿರ್ಧರಿಸಲಾಗಿದೆ.

ಆಂಧ್ರ ಪ್ರದೇಶದ ರಘುನಂದನ್‌ ಯಂಡಮೂರಿ (32) 2012ರಲ್ಲಿ ಈ ಕೃತ್ಯ ಎಸಗಿದ್ದ. ಈತನಿಗೆ 2014ರಲ್ಲಿ ಗಲ್ಲುಶಿಕ್ಷೆ ಘೋಷಿಸಲಾಗಿತ್ತು.

‘ಯಂಡಮೂರಿಯನ್ನು ಫೆಬ್ರುವರಿ 23ರಂದು ಗಲ್ಲಿಗೇರಿಸಲಾಗುವುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ಸಂಜಾತನೊಬ್ಬನಿಗೆ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ.

ಕೇವಲ 50 ಸಾವಿರ ಡಾಲರ್‌ನ ಆಸೆಗೆ ಈತ ಈ ದುಷ್ಕೃತ್ಯ ಎಸಗಿದ್ದ. ಸದ್ಯ ಈತ ಗ್ರೀನೆ ಸ್ಟೇಟ್‌ ಕಾರಾಗೃಹದಲ್ಲಿ ಇದ್ದಾನೆ. ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ವಿಜ್ಞಾನದ ಎಂಜಿನಿಯರಿಂಗ್‌ ಪದವೀಧರನಾದ ಯಂಡಮೂರಿ, ಎಚ್‌–1ಬಿ ವೀಸಾದ ಮೇಲೆ ಅಮೆರಿಕಕ್ಕೆ ಬಂದಿದ್ದ. ಗಲ್ಲುಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಈತ ಮೇಲ್ಮನವಿ ಸಲ್ಲಿಸಿದ್ದ. ಆದರೆ ಕಳೆದ ವರ್ಷದ ಏಪ್ರಿಲ್‌ನಲ್ಲಿ ಈತನ ಕಾನೂನು ಹೋರಾಟ ಅಂತ್ಯವಾಗಿತ್ತು.

ಪೆನ್ಸಿಲ್ವೇನಿಯಾದ ಮೇರಿಯಾನ ಕೌಂಟಿಯಲ್ಲಿನ ಅಪಾರ್ಟ್‌ಮೆಂಟೊಂದರಲ್ಲಿ ಯಂಡಮೂರಿ ತನ್ನ ಪತ್ನಿ ಕೋಮಲಿ ಜೊತೆಗೆ ನೆಲೆಸಿದ್ದ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ 61 ವರ್ಷದ ಸತ್ಯವತಿ ಅವರ ಮನೆಗೆ ನುಗ್ಗಿದ್ದ ಆತ, ಅವರನ್ನು ಚಾಕುವಿನಿಂದ ಇರಿದು ಕೊಂದಿದ್ದ.

ಮೊಮ್ಮಗಳು ಸಾನ್ವಿಯನ್ನು ಅಪಹರಣ ಮಾಡಿದ್ದ. ಆಕೆಯನ್ನು ಸೂಟ್‌ಕೇಸ್‌ನಲ್ಲಿ ಹಾಕಿ ನೆಲಮಹಡಿಯಲ್ಲಿ ಇರಿಸಿದ್ದ. ಅಲ್ಲಿ ಆಕೆ ಉಸಿರುಗಟ್ಟಿ ಮೃತಪಟ್ಟಿದ್ದಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry