ಹವಾಮಾನ ಒಪ್ಪಂದಕ್ಕೆ ಮರಳಲಿರುವ ಅಮೆರಿಕ?

7

ಹವಾಮಾನ ಒಪ್ಪಂದಕ್ಕೆ ಮರಳಲಿರುವ ಅಮೆರಿಕ?

Published:
Updated:

ವಾಷಿಂಗ್ಟನ್: ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಅಮೆರಿಕ ಮರಳುವ ಸಾಧ್ಯತೆ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಸುಳಿವು ನೀಡಿದ್ದಾರೆ. ಆದರೆ ಈ ಬಗ್ಗೆ ಅವರು ಸ್ಪಷ್ಟ ಸೂಚನೆ ನೀಡಿಲ್ಲ.

‘ಪ್ಯಾರಿಸ್ ಹವಾಮಾನ ಒಪ್ಪಂದದ ಬಗ್ಗೆ ನನಗೇನೂ ತಕರಾರಿಲ್ಲ. ಆದರೆ, ಎಂದಿನಂತೆಯೇ ಈ ಹಿಂದಿನ ಸರ್ಕಾರ ಒಪ್ಪಂದ ಮಾಡಿಕೊಂಡ ಕೆಟ್ಟ ಅಂಶಗಳ ಬಗ್ಗೆ ಸಹಮತವಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

2015ರಲ್ಲಿ ಮಾಡಿಕೊಳ್ಳಲಾದ ಮಹತ್ವದ ಹವಾಮಾನ ಒಪ್ಪಂದದಿಂದ ಅಮೆರಿಕ ಕಳೆದ ಜೂನ್‌ನಲ್ಲಿ ಹೊರನಡೆದಿತ್ತು.

ವಿಶ್ವದ ರಾಷ್ಟ್ರಗಳೊಂದಿಗೆ ಕೆಲಸ ಮಾಡುವುದು ಒಳ್ಳೆಯದು: ‘ಭಾರತ, ಚೀನಾ, ರಷ್ಯಾ ಸೇರಿದಂತೆ ಜಗತ್ತಿನ ಯಾವುದೇ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದುವುದು ಒಳ್ಳೆಯ ಸಂಗತಿ. ಅದು ಕೆಟ್ಟದ್ದಲ್ಲ’ ಎಂದು ಟ್ರಂಪ್ ಹೇಳಿದ್ದಾರೆ. ರಷ್ಯಾದೊಂದಿಗೆ ಬಾಂಧವ್ಯ ವೃದ್ಧಿಪಡಿಸಿಕೊಳ್ಳುವ ಇಂಗಿತಕ್ಕೆ ವ್ಯಕ್ತವಾದ ಟೀಕೆಗೆ ಟ್ರಂಪ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ನಾರ್ವೆಯ ಪ್ರಧಾನಿ ಎರ್ನಾ ಸೋಲ್ಬರ್ಗ್ ಅವರೊಂದಿಗೆ ಟ್ರಂಪ್ ಶ್ವೇತಭವನದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದರು. ‘ಉತ್ತರ ಕೊರಿಯಾದೊಂದಿಗೆ ಬಾಂಧವ್ಯ ವೃದ್ಧಿಯಾಗುವುದೂ ತುಂಬಾ ಒಳ್ಳೆಯದು’ ಎಂದು ಅವರು ಹೇಳಿದ್ದಾರೆ.

ಮಸೂದೆ ಮಂಡನೆ: ಸರಣಿ ವಲಸೆ ತಪ್ಪಿಸುವ, ಗಡಿ ಭದ್ರತೆ ಬಿಗಿಗೊಳಿಸುವ ಹಾಗೂ ಅಮೆರಿಕ ಮತ್ತು ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸಲು ನಿಧಿ ಒದಗಿಸುವ ಮಸೂದೆಯನ್ನು ರಿಪಬ್ಲಿಕನ್ ಪಕ್ಷದ ಸಂಸದರೊಬ್ಬರು ಗುರುವಾರ ಮಂಡಿಸಿದ್ದಾರೆ. ಅಮೆರಿಕದಿಂದ ಗಡಿಪಾರಾಗುವ ಭೀತಿ ಎದುರಿಸುತ್ತಿರುವ ಸುಮಾರು ಹತ್ತು ಲಕ್ಷ ವಲಸಿಗರಿಗೆ ಈ ಮಸೂದೆ ಅಂಗೀಕಾರವಾದರೆ ಸಹಾಯವಾಗಬಹುದು ಎಂದು ಹೇಳಲಾಗಿದೆ.

‘ಭದ್ರತೆ, ಸುರಕ್ಷೆಗೆ ಗೋಡೆ ಬೇಕೇ ಬೇಕು. ಗೋಡೆ ನಿರ್ಮಾಣವೂ ಸೇರಿದಂತೆ ಗಡಿ ಭದ್ರತೆಗೆ ಸಂಬಂಧಿಸಿದ ಮಸೂದೆಗಳಿದ್ದರೆ ತಿಳಿಸಿ’ ಎಂದು ಟ್ರಂಪ್ ಶ್ವೇತಭವನದಲ್ಲಿ ಹೇಳಿದ ಕೆಲವೇ ಕ್ಷಣಗಳಲ್ಲಿ ಈ ಮಸೂದೆ ಮಂಡನೆ ಆಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry