ಪಾಕಿಸ್ತಾನ: ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ನೇರಪ್ರಸಾರದಲ್ಲಿ ಮಗಳೊಂದಿಗೆ ಬಂದ ನಿರೂಪಕಿ

7

ಪಾಕಿಸ್ತಾನ: ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ನೇರಪ್ರಸಾರದಲ್ಲಿ ಮಗಳೊಂದಿಗೆ ಬಂದ ನಿರೂಪಕಿ

Published:
Updated:
ಪಾಕಿಸ್ತಾನ: ಬಾಲಕಿ ಮೇಲೆ ನಡೆದ ಅತ್ಯಾಚಾರ ಖಂಡಿಸಿ ನೇರಪ್ರಸಾರದಲ್ಲಿ ಮಗಳೊಂದಿಗೆ ಬಂದ ನಿರೂಪಕಿ

ಇಸ್ಲಾಮಾಬಾದ್: ನಾನು ಇಂದು ನಿರೂಪಕಿಯಲ್ಲ. ಒಂದು ಹೆಣ್ಣು ಮಗುವಿನ ತಾಯಿ. ಹಾಗಾಗಿ ನಾನು  ನಿಮ್ಮ ಮುಂದೆ ನನ್ನ ಮಗಳೊಂದಿಗೆ ಬಂದಿದ್ದೇನೆ...

ಹೀಗೆ ಟಿವಿಯ ನೇರ ಪ್ರಸಾರದಲ್ಲಿ ತಮ್ಮ ಮಗಳೊಂದಿಗೆ ಬಂದ ಪಾಕಿಸ್ತಾನದ ಸಮಾ ಟಿವಿಯ ನಿರೂಪಕಿಯೇ ಕಿರಣ್ ನಾಜ್.

ಕಳೆದ ವಾರ ಎಂಟು ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ವಿರುದ್ಧ ದನಿ ಎತ್ತಿರುವ ನಿರೂಪಕಿ ಕಿರಣ್ ನಾಜ್ ಅವರು ಘಟನೆ ಬಗ್ಗೆ ತಮ್ಮಲ್ಲಿರುವ ನೋವನ್ನು ನೇರಪ್ರಸಾರದ ಮೂಲಕ ವ್ಯಕ್ತಪಡಿಸಿದ್ದಾರೆ.

ಜನವರಿ 4 ರಂದು ಟ್ಯೂಷನ್‌ಗೆ ಹೋದ ಬಾಲಕಿಯ ಮೇಲೆ ಅತ್ಯಾಚಾರ ನಡೆದು ಆಕೆ ಸಾವಿಗೀಡಾಗಿದ್ದಳು. ಬಾಲಕಿಯ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಯನ್ನು ಪಾಕಿಸ್ತಾನದ ಕಲಾವಿದರು, ಗಾಯಕ ಅಲಿ ಜಾಫರ್ ಸೇರಿದಂತೆ ಹಲವರು ಖಂಡಿಸಿದ್ದಾರೆ.

ಈ  ಬಗ್ಗೆ ಟ್ವೀಟ್ ಮಾಡಿರುವ ನಟಿ ಮಹೀರಾ ಖಾನ್, 'ಸಮಾಜದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ನಾವು ಮುಕ್ತವಾಗಿ ಮಾತನಾಡಬೇಕಾಗಿದೆ. ನಮ್ಮ ಶಾಲೆಗಳ ಪಠ್ಯಕ್ರಮದಲ್ಲಿ ಸೇರಿಸುವುದು, ಅರಿವನ್ನು ಮೂಡಿಸುವುದು ಮುಖ್ಯ. ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರವನ್ನು ಉತ್ತೇಜಿಸುವುದು ನಾಚಿಕೆಗೇಡಿನ ಕೆಲಸ. ಇದನ್ನು ನಿಲ್ಲಿಸಬೇಕು' ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry