ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11–10–2018

Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಸಂಸ್ಥೆಯ ಸುಧಾರಣೆಗೆ ಸರ್ವ ಯತ್ನ ವರದಿ: ಎಸ್‌.ವಿ. ಜಯಶೀಲರಾವ್‌
ಲಾಲ್‌ಬಹಾದುರ್‌ ನಗರ, ಜ. 11–
1967ರ ಚುನಾವಣೆಗಳ ಅನಂತರದ ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸುವಂತೆ ಸಂಸ್ಥೆಯನ್ನು ಸುಧಾರಿಸುವ ಭರವಸೆಯನ್ನು ಅಧ್ಯಕ್ಷ ಶ್ರೀ ಎಸ್‌. ನಿಜಲಿಂಗಪ್ಪ ಅವರು ನೀಡಿದ ಬಳಿಕ, 71ನೆ ಕಾಂಗ್ರೆಸ್‌ ಅಧಿವೇಶನ ಇಲ್ಲಿ ಇಂದು ಮಧ್ಯಾಹ್ನ 12.45 ಗಂಟೆಗೆ ಮುಕ್ತಾಯವಾಯಿತು.

ಲಾಲ್‌ ಬಹಾದುರ್‌ ಅವರಿಗೆ ಶ್ರದ್ಧಾಂಜಲಿ
ಲಾಲ್‌ಬಹಾದುರ್‌ ನಗರ, ಜ. 11–
ದಿ. ಲಾಲ್‌ಬಹಾದುರ್‌ ಶಾಸ್ತ್ರಿಯವರಿಗೆ ಅವರ ಎರಡನೇ ಪುಣ್ಯ ತಿಥಿಯಾದ ಇಂದು ಕಾಂಗ್ರೆಸಿನ 71ನೇ ಪೂರ್ಣಾಧಿವೇಶನ ಶ್ರದ್ಧಾಂಜಲಿ ಸಮರ್ಪಿಸಿತು.

ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ. ಉಪ ಪ್ರಧಾನಿ ಶ್ರೀ ಮುರಾರ್ಜಿ ದೇಸಾಯಿ, ಆಂಧ್ರ ಮುಖ್ಯಮಂತ್ರಿ ಶ್ರೀ ಬ್ರಹ್ಮಾನಂದರೆಡ್ಡಿ ಮತ್ತಿತರ ನಾಯಕರು ದಿ. ಬಹಾದುರ್‌ ರಾಷ್ಟ್ರಕ್ಕೆ ಹಾಗೂ ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದರು.

ಮಾನವ ಹೃದಯಕ್ಕೆ ಪ್ರಾಣಿಯ ಕವಾಟ
ಟಲ್‌ ಅವಿವ್‌, ಜ. 11–
ಕರುವೊಂದರ ಕವಾಟವನ್ನು ಮಹಿಳೆಯೊಬ್ಬಳ ಹೃದಯಕ್ಕೆ ಜೋಡಿಸುವ ಶಸ್ತ್ರಚಿಕಿತ್ಸೆಯನ್ನು ಇಲ್ಲಿಗೆ ಸಮೀಪದಲ್ಲಿರುವ ಬೈಲಿನ್ಸನ್‌ ಆಸ್ಪತ್ರೆಯಲ್ಲಿ ಪ್ರೊ. ಮಾರಿಸ್‌ ಲೆವಿ ಅವರು ಯಶಸ್ವಿಯಾಗಿ ನಿರ್ವಹಿಸಿದರೆಂದು ನಿನ್ನೆ ಪತ್ರಿಕೆಗಳು ವರದಿ ಮಾಡಿವೆ.

ಭಾಷಣಕ್ಕೆ ಮುನ್ನ ನೂಕುನುಗ್ಗಲು: ವ್ಯವಸ್ಥೆಗೆ ಧಕ್ಕೆ
ಲಾಲ್‌ಬಹಾದುರ್‌ ನಗರ, ಜ. 11–
ಕಾಂಗ್ರೆಸ್ಸಿನ 71ನೆಯ ಮಹಾಧಿವೇಶನವನ್ನುದ್ದೇಶಿಸಿ ಶ್ರೀ ನಿಜಲಿಂಗಪ್ಪನವರು ಅಧ್ಯಕ್ಷ ಭಾಷಣ ನೀಡಲು ಆರಂಭಿಸುತ್ತಿರುವಂತೆಯೇ, ಪ್ರತಿನಿಧಿಗಳ ಆವರಣವನ್ನು ಸುತ್ತುವರಿದ ಜನಸಮೂಹ ನುಗ್ಗತೊಡಗಿತು. ಇದರಿಂದ ಕೆಲವು ನಿಮಿಷ ಕಾಲ ಸಭೆಯಲ್ಲಿ ಅಸ್ತವ್ಯಸ್ತ ಉಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT