ಭಾರತದ ಐ.ಟಿ ಕಂಪನಿಗಳ ನಿದ್ದೆಗೆಡಿಸಿದ್ದ ಅಮೆರಿಕ ಸಂಸದ ನಿವೃತ್ತಿ ಘೋಷಣೆ

7

ಭಾರತದ ಐ.ಟಿ ಕಂಪನಿಗಳ ನಿದ್ದೆಗೆಡಿಸಿದ್ದ ಅಮೆರಿಕ ಸಂಸದ ನಿವೃತ್ತಿ ಘೋಷಣೆ

Published:
Updated:
ಭಾರತದ ಐ.ಟಿ ಕಂಪನಿಗಳ ನಿದ್ದೆಗೆಡಿಸಿದ್ದ ಅಮೆರಿಕ ಸಂಸದ ನಿವೃತ್ತಿ ಘೋಷಣೆ

ವಾಷಿಂಗ್ಟನ್‌: ಕಠಿಣ ಶಾಸನ ಪ್ರಸ್ತಾವಗಳ ಮೂಲಕ ಭಾರತದ ಐ.ಟಿ ಕಂಪನಿಗಳ ನಿದ್ದೆಗೆಡಿಸಿದ್ದ ರಿಪಬ್ಲಿಕನ್ ಪಕ್ಷದ ಸಂಸದ ಡರೇಲ್ ಇಸ್ಸಾ ಅವರು ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ.

‘ಪ್ರೊಟೆಕ್ಟ್‌ ಅಂಡ್‌ ಗ್ರೋ ಅಮೆರಿಕನ್‌ ಜಾಬ್ಸ್‌ ಆ್ಯಕ್ಟ್‌’ ಎಂಬ ಪುಸ್ತಕದ ಮೂಲಕ ಇಸ್ಸಾ ಪ್ರಸಿದ್ಧರಾಗಿದ್ದರು. ಭಾರತದ ಐ.ಟಿ ಕಂಪನಿಗಳ ಉದ್ಯಮಗಳಿಗೆ ಸಾಕಷ್ಟು ಹೊಡೆತ ನೀಡುವ ಪ್ರಸ್ತಾವಗಳು ಇದರಲ್ಲಿವೆ.

ಕ್ಯಾಲಿಫೋರ್ನಿಯಾದ 49ನೇ ಕಾಂಗ್ರೆಸ್ ಜಿಲ್ಲೆಯಿಂದ ಮರು ಆಯ್ಕೆ ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಇಸ್ಸಾ ಈ ಕ್ಷೇತ್ರವನ್ನು 18 ವರ್ಷಗಳಿಂದ ಪ್ರತಿನಿಧಿಸುತ್ತಿದ್ದರು.

ನಿವೃತ್ತಿ ಘೋಷಿಸಿದ ರಿಪಬ್ಲಿಕನ್ ಪಕ್ಷದ ಎರಡನೇ ಸಂಸದ ಇವರಾಗಿದ್ದಾರೆ. ಮುಂದಿನ ನವೆಂಬರ್‌ನಲ್ಲಿ ನಡೆಯಲಿರುವ ಮಧ್ಯಾವಧಿ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಪ್ರಭಾವ ಹೆಚ್ಚುತ್ತಿರುವ ಕಾರಣ ಇವರ ನಿವೃತ್ತಿ ನಿರ್ಧಾರ ಹೊರಬಿದ್ದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಎಚ್‌1ಬಿ ವೀಸಾ ಬಳಸಿ ಕೆಲಸ ಮಾಡುವ ಭಾರತದ ಐ.ಟಿ ಕಂಪನಿಗಳ ಉದ್ಯೋಗಿಗಳನ್ನೇ ಗುರಿಯಾಗಿರಿಸಿಕೊಂಡು ಇಸ್ಸಾ ಹಲವು ಪ‍್ರಸ್ತಾವಗಳನ್ನು ಕಾಂಗ್ರೆಸ್‌ನಲ್ಲಿ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry