ರಕ್ಷಿಸಿಟ್ಟ ಭ್ರೂಣದಿಂದಲೂ ಹೆಚ್ಚಿನ ಫಲ: ಅಧ್ಯಯನ

7
ಮಕ್ಕಳಿಲ್ಲದವರಿಗೆ ಸಿಹಿ ಸುದ್ದಿ

ರಕ್ಷಿಸಿಟ್ಟ ಭ್ರೂಣದಿಂದಲೂ ಹೆಚ್ಚಿನ ಫಲ: ಅಧ್ಯಯನ

Published:
Updated:

ಮೆಲ್ಬರ್ನ್ : ಪ್ರನಾಳ ಪ್ರಕ್ರಿಯೆಯಲ್ಲಿ ತಾಜಾ ಭ್ರೂಣವನ್ನು ಗರ್ಭಾಶಯಕ್ಕೆ ಸೇರಿಸಿದಾಗ ಅದು ಬೆಳೆಯುವ ಸಾಧ್ಯತೆ ಎಷ್ಟಿರುತ್ತದೆಯೋ ಅಷ್ಟೇ ಸಾಧ್ಯತೆ ಶೀತಾವರಣದಲ್ಲಿ ರಕ್ಷಿಸಿಟ್ಟ ಭ್ರೂಣವನ್ನು ಗರ್ಭಾಶಯಕ್ಕೆ ಸೇರಿಸಿದಾಗಲೂ ಇರುತ್ತದೆ ಎಂದು ಅಧ್ಯಯನದಿಂದ ಕಂಡುಕೊಳ್ಳಲಾಗಿದೆ.

‘ಶೀತಾವರಣದಲ್ಲಿ ರಕ್ಷಿಸಿಟ್ಟ ಭ್ರೂಣವನ್ನು ಪ್ರನಾಳ ಪ್ರಕ್ರಿಯೆ ಮೂಲಕ ಬೆಳೆಸುವ ಪ್ರಕ್ರಿಯೆ ವಿಶ್ವದಾದ್ಯಂತ ಜನಪ್ರಿಯವಾಗುತ್ತಿದೆ. ಈ ವಿಧಾನದ ಮೂಲಕ ಮಗು ಪಡೆಯುವ ನಿರೀಕ್ಷೆಯಲ್ಲಿರುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಂಥವರಿಗೆ ಈ ಮಹತ್ವದ ಸಂಶೋಧನೆ ಸಿಹಿ ಸುದ್ದಿ ನೀಡಿದೆ’ ಎಂದು ವೈದ್ಯಕೀಯ ಹಾಗೂ ಔಷಧ ವಿಜ್ಞಾನ ವಿವಿಯ ಲ್ಯಾನ್ ಎನ್. ವೂಂಗ್ ಹೇಳಿದ್ದಾರೆ.

ಅಡಿಲೇಡ್ ವಿಶ್ವವಿದ್ಯಾಲಯ ಹಾಗೂ ವಿಯೆಟ್ನಾಂನ ವೈದ್ಯಕೀಯ ಹಾಗೂ ಔಷಧ ವಿಜ್ಞಾನ ವಿಶ್ವವಿದ್ಯಾಲಯದ ವಿಜ್ಞಾನಿಗಳು ಜಂಟಿಯಾಗಿ ಸಂಶೋಧನೆ ನಡೆಸಿದ್ದಾರೆ. ಅಂಡಾಶಯ ಸಂಬಂಧಿ ಸಮಸ್ಯೆ (ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್–ಪಿಸಿಒಎಸ್) ಹೊರತಾದ ಕಾರಣಕ್ಕೆ ಬಂಜೆತನ ಅನುಭವಿಸುತ್ತಿರುವ 800 ಮಹಿಳೆಯರನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿದೆ.

ತಾಜಾ ಭ್ರೂಣ ಪಡೆದ ಶೇ35ರಷ್ಟು ಮಹಿಳೆಯರು ಯಶಸ್ವಿಯಾಗಿ ಗರ್ಭ ಧರಿಸಿದ್ದರೆ, ಶೇ 36ರಷ್ಟು ಮಹಿಳೆಯರು ರಕ್ಷಿಸಿಟ್ಟ ಭ್ರೂಣ ಪಡೆದು ಗರ್ಭಧರಿಸಿದ್ದಾರೆ. ಇವರಲ್ಲಿ ಮಗು ಜನಿಸುವ ದರವು ತಾಜಾ ಭ್ರೂಣ ಪಡೆದ ಮಹಿಳೆಯರಲ್ಲಿ ಶೇ 32ರಷ್ಟು ಇದ್ದರೆ, ರಕ್ಷಿಸಿಟ್ಟ ಭ್ರೂಣ ಪಡೆದ ಮಹಿಳೆಯರಲ್ಲಿ ಶೇ 34ರಷ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry