ರಾಜ್ಯದಲ್ಲಿ ತಂಬಾಕು ಉತ್ಪನ್ನ ಬಳಕೆ ಇಳಿಮುಖ

7

ರಾಜ್ಯದಲ್ಲಿ ತಂಬಾಕು ಉತ್ಪನ್ನ ಬಳಕೆ ಇಳಿಮುಖ

Published:
Updated:
ರಾಜ್ಯದಲ್ಲಿ ತಂಬಾಕು ಉತ್ಪನ್ನ ಬಳಕೆ ಇಳಿಮುಖ

ಬೆಂಗಳೂರು: ರಾಜ್ಯದಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಐದು ವರ್ಷಗಳಲ್ಲಿ ಶೇ 6ರಷ್ಟು ಕಡಿಮೆಯಾಗಿದೆ.

2016–17ರಲ್ಲಿ ‘ದಿ ಗ್ಲೋಬಲ್ ಅಡಲ್ಟ್ ಟೊಬ್ಯಾಕೊ ಸರ್ವೆ(ಜಿಎಟಿಎಸ್‌)’ ನಡೆಸಿದ ಸಮೀಕ್ಷಾ ವರದಿಯನ್ನು ವಿಧಾನಸಭಾ ಉಪಾಧ್ಯಕ್ಷ ಎನ್.ಎಚ್‌.ಶಿವಶಂಕರ ರೆಡ್ಡಿ ಗುರುವಾರ ಬಿಡುಗಡೆ ಮಾಡಿದರು.

2009–10ರಲ್ಲಿ ಈ ರೀತಿಯ ಸಮೀಕ್ಷೆ ನಡೆದಿತ್ತು. 2016ರ ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಸಮೀಕ್ಷೆ ನಡೆದಿದೆ. 1,311 ಪುರುಷರು ಹಾಗೂ 1,403 ಮಹಿಳೆಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ.

ಧೂಮಪಾನಿ ಮಹಿಳೆಯರು: ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ 35 ಪುರುಷರು, ಶೇ 10 ಮಹಿಳೆಯರು ತಂಬಾಕು ಉತ್ಪನ್ನ ಬಳಸುತ್ತಿದ್ದಾರೆ.

ಶೇ 0.7ರಷ್ಟು ಮಹಿಳೆಯರು, ಶೇ 16.8ರಷ್ಟು ಪುರುಷರು ಧೂಮಪಾನಿಗಳಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry