ಇ–ಕೆವೈಸಿ: ಭಾರ್ತಿ ಏರ್‌ಟೆಲ್‌ಗೆ ಮಾರ್ಚ್‌ 31ರವರೆಗೆ ಅವಕಾಶ

7

ಇ–ಕೆವೈಸಿ: ಭಾರ್ತಿ ಏರ್‌ಟೆಲ್‌ಗೆ ಮಾರ್ಚ್‌ 31ರವರೆಗೆ ಅವಕಾಶ

Published:
Updated:

ನವದಹೆಲಿ: ಆಧಾರ್‌ ಬಳಸಿ ಗ್ರಾಹಕರ ಗುರುತು ಮರು ದೃಢೀಕರಣಕ್ಕೆ ಭಾರ್ತಿ ಏರ್‌ಟೆಲ್‌ಗೆ ನೀಡಿದ್ದ ತಾತ್ಕಾಲಿಕ ಅನುಮತಿಯನ್ನು ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ.

ಗುರುತು ಮರು ದೃಢೀಕರಣ ಸಂದರ್ಭದಲ್ಲಿ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ ಖಾತೆ ತೆರೆಯುವಂತೆ ಮಾಡಿ ಗ್ರಾಹಕರ ಅಡುಗೆ ಅನಿಲ ಸಹಾಯಧನವನ್ನು ಈ ಖಾತೆಗೆ ಜಮಾ ಆಗುವಂತೆ ಭಾರ್ತಿ ಏರ್‌ಟೆಲ್‌ ಮಾಡಿತ್ತು. ಒಟ್ಟು ₹138 ಕೋಟಿ ಸಹಾಯಧನ ಇಂತಹ ಖಾತೆಗಳಿಗೆ ಜಮಾ ಆಗಿತ್ತು. ಇದು ವಿವಾದವಾದ ಕಾರಣ ಈ ಮೊತ್ತವನ್ನು ಕಂಪನಿಯು ಹಿಂದಿರುಗಿಸಿತ್ತು. ಹಾಗಾಗಿ ಆಧಾರ್‌ ಮೂಲಕ ಮರು ದೃಢೀಕರಣಕ್ಕೆ ಈ ತಿಂಗಳ 10ರವರೆಗೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಅವಕಾಶ ಕೊಟ್ಟಿತ್ತು.

ತನಿಖೆ ಮತ್ತು ಲೆಕ್ಕಪರಿಶೋಧನೆ ಪೂರ್ಣಗೊಳ್ಳುವತನಕ ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌ನ ಇ–ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪರವಾನಗಿಯ ಅಮಾನತು ಮುಂದುವರಿಯಲಿದೆ ಎಂದು ಯುಐಡಿಎಐ ಮೂಲ ಹೇಳಿದೆ.

ಮೊಬೈಲ್ ಸಿಮ್‌ಗಳ ಮರು ದೃಢೀಕರಣಕ್ಕೆ ಮಾರ್ಚ್‌ 31ರ ಗಡುವನ್ನು ಸುಪ್ರೀಂ ಕೋರ್ಟ್‌ ವಿಧಿಸಿದೆ. ಹಾಗಾಗಿ, ಗ್ರಾಹಕರ ಹಿತವನ್ನು ದೃಷ್ಟಿಯಲ್ಲಿರಿಸಿ

ಏರ್‌ಟೆಲ್‌ಗೆ ತಾತ್ಕಾಲಿಕ ಅನುಮತಿ ನೀಡಲಾಗಿದೆ ಎಂದು ಮೂಲ ತಿಳಿಸಿದೆ.

***

‘ಕುದುರೆ ಹೋದಮೇಲೆ ಲಾಯಕ್ಕೆ ಬೀಗ’

‘ಹಲವು ಸೇವಾ ಕಂಪೆನಿಗಳ ಜತೆ ಕೋಟ್ಯಂತರ ಜನರು ತಮ್ಮ ಆಧಾರ್ ವಿವರವನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಆಧಾರ್‌ಗೆ ಪರ್ಯಾಯ ಸಂಖ್ಯೆಯನ್ನು ನೀಡುವ ಯುಐಡಿಎಐನ ಕ್ರಮ, ಕುದುರೆಗಳೆಲ್ಲಾ ಓಡಿಹೋದ ಮೇಲೆ ಲಾಯಕ್ಕೆ ಬೀಗ ಹಾಕಿದಂತಿದೆ’ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಆಧಾರ್ ಸಂಖ್ಯೆಗೆ ಪರ್ಯಾಯವಾಗಿ 16 ಸಂಖ್ಯೆಗಳನ್ನು ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವುದಾಗಿ ಯುಐಡಿಎಐ ಬುಧವಾರ ಹೇಳಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry