ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲ್ಲಪೆರಿಯಾರ್‌ ಅಣೆಕಟ್ಟು ಸಮಿತಿ ರಚನೆಗೆ ‘ಸುಪ್ರೀಂ’ ಆದೇಶ

Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕೇರಳದಲ್ಲಿರುವ 180 ವರ್ಷಗಳಷ್ಟು ಹಳೆಯದಾಗಿರುವ ಮುಲ್ಲಪೆರಿಯಾರ್‌ ಅಣೆಕಟ್ಟಿನ ಸ್ಥಳದಲ್ಲಿ ಸಂಭವಿಸಬಹುದಾದ ‘ಅನಿರೀಕ್ಷಿತ‌’ ವಿಪತ್ತಿನ ಬಗ್ಗೆ ಗಮನ ಹರಿಸಲು ಮೂರು ಪ್ರತ್ಯೇಕ ಸಮಿತಿಯನ್ನು ರಚನೆ ಮಾಡುವಂತೆ ಸುಪ್ರೀಂಕೋರ್ಟ್ ಗುರುವಾರ ಕೇಂದ್ರ ಸರ್ಕಾರ, ತಮಿಳುನಾಡು ಮತ್ತು ಕೇರಳ ಸರ್ಕಾರಗಳಿಗೆ ನಿರ್ದೇಶಿಸಿದೆ.

‘ ಈ ಸಮಿತಿಯು ವಿಪತ್ತು ಕುರಿತಾದ ಅಂಶಗಳನ್ನು ಮಾತ್ರ ಪರಿಶೀಲಿಸಬೇಕು. ಅಣೆಕಟ್ಟಿನ ಸುರಕ್ಷತೆ ಮತ್ತು ಜೀವಿತಾವಧಿಯ ಕುರಿತಾದ ಅಂಶಗಳನ್ನು 2014ರಲ್ಲಿ ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಸಮಿತಿಯೇ ನೋಡಿಕೊಳ್ಳಲಿದೆ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.

ಈ ಅಣೆಕಟ್ಟು ತೀರಾ ಹಳೆಯದಾಗಿದ್ದು ರಕ್ಷಣೆಯ ಅಗತ್ಯವಿದೆ. ಇದರ ಸುತ್ತಮುತ್ತ ಸುಮಾರು 30ಲಕ್ಷ ಜನರು ವಾಸವಾಗಿದ್ದು, ಅಣೆಕಟ್ಟಿನಿಂದಾಗಿ ಅವರೆಲ್ಲಾ ಆತಂಕದಿಂದ ಬದುಕುವಂತಾಗಿದೆ. ಆದ್ದರಿಂದ ಇದರ ರಕ್ಷಣೆಗೆ ಆದೇಶಿಸುವಂತೆ ಕೋರಿ ಕೇರಳದ ರಸೆಲ್‌ ಜಾಯ್‌ ಎನ್ನುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT