ಲಾಲು ಪರವಾಗಿ ನ್ಯಾಯಾಧೀಶರ ಮೇಲೆ ಪ್ರಭಾವ: ತನಿಖೆಗೆ ಆದೇಶ

7

ಲಾಲು ಪರವಾಗಿ ನ್ಯಾಯಾಧೀಶರ ಮೇಲೆ ಪ್ರಭಾವ: ತನಿಖೆಗೆ ಆದೇಶ

Published:
Updated:

ಲಖನೌ: ಮೇವು ಹಗರಣದ ವಿಚಾರಣೆ ನಡೆಸಿದ್ದ ಸಿಬಿಐ ವಿಶೇಷ ನ್ಯಾಯಾಧೀಶರ ಮೇಲೆ ಅಪರಾಧಿ ಲಾಲು ಪ್ರಸಾದ್‌ ಪರವಾಗಿ ಕೆಲವು ಅಧಿಕಾರಿಗಳು ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ.‌

‘ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಯ ಆಧಾರದ ಮೇಲೆ ತನಿಖೆ ನಡೆಸಿ ಶೀಘ್ರ ವರದಿ ಸಲ್ಲಿಸುವಂತೆ ಝಾನ್ಸಿ ವಿಭಾಗೀಯ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಮುಖ್ಯಮಂತ್ರಿಗಳ ಕಚೇರಿ ಟ್ವೀಟ್‌ ಮಾಡಿದೆ.

ಮೇವು ಹಗರಣದ ತನಿಖೆ ನಡೆಸುತ್ತಿರುವ ನ್ಯಾಯಾಧೀಶರಾದ ಶಿವಪಾಲ್‌ ಸಿಂಗ್‌ ಅವರಿಗೆ ಜಲೌನ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮನ್ನನ್‌ ಅಖ್ತರ್‌ ಮತ್ತು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ಭೈರ್‌ಪಾಲ್‌ ಸಿಂಗ್‌ ಅವರು ಕರೆ ಮಾಡಿ ಲಾಲು ಪರ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿತ್ತು.

‘ಲಾಲು ಪ್ರಸಾದ್‌ ಪರ ಪ್ರಭಾವ ಬೀರಲು ಕೆಲವರು ನನಗೆ ಕರೆ ಮಾಡಿದ್ದಾರೆ’ ಎಂದು ನ್ಯಾಯಾಧೀಶರಾದ ಶಿವಪಾಲ್‌ ಸಿಂಗ್‌ ಈಚೆಗೆ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry