ಎಟಿಪಿ ಟೂರ್ನಿ: ಬೋಪಣ್ಣ ಜೋಡಿಯ ಫೈನಲ್ ಕಸನು ಭಗ್ನ

7

ಎಟಿಪಿ ಟೂರ್ನಿ: ಬೋಪಣ್ಣ ಜೋಡಿಯ ಫೈನಲ್ ಕಸನು ಭಗ್ನ

Published:
Updated:

ಸಿಡ್ನಿ : ಮೊದಲ ಬಾರಿ ಜೊತೆಯಾಗಿ ಆಡಿದ ರೋಹನ್‌ ಬೋ‍ಪಣ್ಣ ಮತ್ತು ಎಡ್ವರ್ಡ್ ರೋಜರ್ ವಾಸೆಲಿನ್‌ ಜೋಡಿಯ ಎಟಿಪಿ ಸಿಡ್ನಿ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯ ಫೈನಲ್‌ ಕನಸು ಭಗ್ನಗೊಂಡಿದೆ.

ಸೆಮಿಫೈನಲ್‌ನಲ್ಲಿ ಈ ಜೋಡಿ ವಿಶ್ವದ ಅಗ್ರ ಕ್ರಮಾಂಕದ ಲೂಕಾಸ್ ಕುಬೋಟ್ ಮತ್ತು ಮಾರ್ಸೆಲೊ ಮೆಲೊ ಅವರ ಎದುರು ಸೋತರು.

ಬೋಪಣ್ಣ ಮತ್ತು ಫ್ರಾನ್ಸ್‌ನ ವಾಸೆಲಿನ್‌ ಜೋಡಿಗೆ ಇಲ್ಲಿ ನಾಲ್ಕನೇ ಶ್ರೇಯಾಂಕ ನೀಡಲಾಗಿತ್ತು. ಪಾಲೆಂಡ್‌ ಮತ್ತು ಬ್ರೆಜಿಲ್‌ನ ಲೂಕಾಸ್‌–ಮಾರ್ಸೆಲೊ ಜೋಡಿ ಅಗ್ರ ಶ್ರೇಯಾಂಕ ಹೊಂದಿತ್ತು.

ಮೊದಲ ಸೆಟ್‌ನಲ್ಲಿ 4–6ರ ಹಿನ್ನಡೆ ಕಂಡ ಬೋಪಣ್ಣ ಮತ್ತು ವಾಸೆಲಿನ್ ಎರಡನೇ ಸೆಟ್‌ನಲ್ಲಿ ಪ್ರತಿರೋಧ ಒಡ್ಡಿ 7–5ರಿಂದ ಗೆದ್ದರು. ಆದರೆ ಪಟ್ಟು ಬಿಡದ ಎದುರಾಳಿಗಳು 10–8ರಿಂದ ನಿರ್ಣಾಯಕ ಸೆಟ್ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry