ಎಚ್‌ಪಿಎಲ್‌: ಮುಂಡಗೋಡ ಮಾನ್‌ಸ್ಟಾರ್ಸ್‌ ತಂಡಕ್ಕೆ ಗೆಲುವು

7

ಎಚ್‌ಪಿಎಲ್‌: ಮುಂಡಗೋಡ ಮಾನ್‌ಸ್ಟಾರ್ಸ್‌ ತಂಡಕ್ಕೆ ಗೆಲುವು

Published:
Updated:
ಎಚ್‌ಪಿಎಲ್‌: ಮುಂಡಗೋಡ ಮಾನ್‌ಸ್ಟಾರ್ಸ್‌ ತಂಡಕ್ಕೆ ಗೆಲುವು

ಹುಬ್ಬಳ್ಳಿ: ಸವಾಲಿನ ಮೊತ್ತ ಕಲೆಹಾಕಿದ್ದ ಮುಂಡಗೋಡ ಮಾನ್‌ಸ್ಟಾರ್ಸ್‌ ತಂಡ ಹುಬ್ಬಳ್ಳಿ ಪ್ರೀಮಿಯರ್‌ ಲೀಗ್ (ಎಚ್‌ಪಿಎಲ್‌) ಕ್ರಿಕೆಟ್‌ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಗೆಲುವು ಪಡೆಯಿತು.

ರಾಜನಗರದ ಕೆ.ಎಸ್‌.ಸಿ.ಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಡಗೋಡ ತಂಡ 20 ಓವರ್‌ಗಳಲ್ಲಿ 177 ರನ್‌ ಗಳಿಸಿತ್ತು. ಸವಾಲಿನ ಗುರಿಯ ಎದುರು ಉತ್ತಮ ಹೋರಾಟ ತೋರಿದ ಶಿರಸಿಯ ಟಿ.ಎಸ್‌.ಎಸ್‌. ಟೈಗರ್ಸ್ ತಂಡ 167 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಎರಡೂ ತಂಡಗಳೂ ಬಲಿಷ್ಠ ಆಟಗಾರರನ್ನು ಒಳಗೊಂಡಿದ್ದರಿಂದ ಪಂದ್ಯ ಕೊನೆಯವರೆಗೂ ಕುತೂಹಲ ಉಳಿಸಿಕೊಂಡಿತ್ತು. ಡೆತ್‌ ಓವರ್‌ಗಳಲ್ಲಿ ವೇಗಿ ಎಚ್‌.ಎಸ್‌. ಶರತ್‌ ಚುರುಕಿನ ಬೌಲಿಂಗ್‌ ಮಾಡಿ ಗೆಲುವು ತಂದುಕೊಟ್ಟರು.ಪಂದ್ಯ ಮುಗಿಯುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಕೆಲ ಅಭಿಮಾನಿಗಳು ಮೈದಾನದೊಳಕ್ಕೆ ಶರತ್‌ ಕೈ ಕುಲುಕಿ ಅಭಿನಂದಿಸಿದರು.

ಇನ್ನೊಂದು ಪಂದ್ಯದಲ್ಲಿ ಎನ್‌.ಕೆ. ವಾರಿಯರ್ಸ್‌ ವಿರುದ್ಧದ ಪಂದ್ಯದಲ್ಲಿ ನಿಲೇಕಣಿ ಚಾಲೆಂಜರ್ಸ್‌ ಎಂಟು ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ವಾರಿಯರ್ಸ್‌ ನೀಡಿದ್ದ 147 ರನ್‌ ಗುರಿಯನ್ನು ಚಾಲೆಂಜರ್ಸ್‌ 18.3 ಓವರ್‌ಗಳಲ್ಲಿ ತಲುಪಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry