ಟೆನಿಸ್: ಸೆಮಿಗೆ ಸಂಜಯ್, ಆರ್ಯನ್

7

ಟೆನಿಸ್: ಸೆಮಿಗೆ ಸಂಜಯ್, ಆರ್ಯನ್

Published:
Updated:

ಮೈಸೂರು: ಅಗ್ರಶ್ರೇಯಾಂಕದ ಆಟಗಾರ ಜಿ.ಎಸ್.ಸಂಜಯ್ ಮತ್ತು ಆರ್ಯನ್ ಅಶ್ವಥ್ ಅವರು ಇಲ್ಲಿ ನಡೆಯುತ್ತಿರುವ ಕೆಟಿಪಿಪಿಎ–ಎಂಟಿಸಿ ಎಐಟಿಎ 18 ವರ್ಷ ವಯಸ್ಸಿನೊಳಗಿನವರ ಟೆನಿಸ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

ಮೈಸೂರು ಟೆನಿಸ್ ಕ್ಲಬ್‌ನಲ್ಲಿ ನಡೆದ ಬಾಲಕರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೇರಳದ ಸಂಜಯ್ 2–6, 6–3, 6–2 ರಲ್ಲಿ ಮಧ್ಯಪ್ರದೇಶದ ಆನಂದ್ ಪ್ರಕಾಶ್ ಗುಪ್ತಾ ಅವರನ್ನು ಮಣಿಸಿದರು. ಸ್ಥಳೀಯ ಆಟಗಾರ ಆರ್ಯನ್ 6–4, 6–1 ರಲ್ಲಿ ತಮಿಳುನಾಡಿನ ಹರ್ಷವರ್ಧನ ವಿರುದ್ಧ ಜಯ ಪಡೆದರು.

ಬಾಲಕಿಯರ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮಧ್ಯಪ್ರದೇಶದ ಪಿ.ಯಶಸ್ವಿನಿ ಸಿಂಗ್ 6–0, 6–1 ರಲ್ಲಿ ನಿತ್ಯಾ ಶೇಖರ್ ಎದುರೂ, ಕರ್ನಾಟಕದ ಕೆ.ಖುಷಿ ಸಂತೋಷ್ 6–2, 6–3 ರಲ್ಲಿ ಕೇರಳದ ನಿವೇದಿತಾ ಶಂಕರ್ ಮೇಲೂ, ತಮಿಳುನಾಡಿನ ಜಿ.ಯಶೋಮತಿ 7–5, 6–1 ರಲ್ಲಿ ಕರ್ನಾಟಕದ ಸಾಗರಿಕಾ ಸೋನಿ ವಿರುದ್ಧವೂ, ತೆಲಂಗಾಣದ ಸಂಜನಾ ಸಿರಿಮಲ್ಲ 6–1, 6–1 ರಲ್ಲಿ ಆರ್‌.ಸಗಾಯ ಏಂಜೆಲಿನ್ ಶಾಲಿನಿ ಎದುರೂ ಜಯ ಸಾಧಿಸಿ ನಾಲ್ಕರಘಟ್ಟ ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry