ಜಿದಾನೆ ಒಪ್ಪಂದ ಮುಂದುವರಿಕೆ

7

ಜಿದಾನೆ ಒಪ್ಪಂದ ಮುಂದುವರಿಕೆ

Published:
Updated:
ಜಿದಾನೆ ಒಪ್ಪಂದ ಮುಂದುವರಿಕೆ

ಮ್ಯಾಡ್ರಿಡ್‌ : ರಿಯಲ್‌ ಮ್ಯಾಡ್ರಿಡ್‌ ಫುಟ್‌ಬಾಲ್‌ ಕ್ಲಬ್‌ನ ಕೋಚ್‌ ಆಗಿ ಜಿನೆದಿನ್ ಜಿದಾನೆ ಮುಂದವರಿಯಲಿದ್ದಾರೆ. ಕ್ಲಬ್‌ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಮುಂದುವರಿಸಲು ನಿರ್ಧರಿಸಿರುವುದಾಗಿ ಸ್ವತಃ ಅವರೇ ತಿಳಿಸಿದ್ದಾರೆ. 2020ರ ವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರಿಲಿದ್ದಾರೆ.

ಕೋಪಾ ಡೆಲ್‌ ರೇ ಲೀಗ್‌ನ ಬುಧವಾರದ ಪಂದ್ಯದಲ್ಲಿ ನ್ಯೂಮಾನಿಕಾ ತಂಡದ ವಿರುದ್ಧ 2–2ರಿಂದ ಡ್ರಾ ಸಾಧಿಸಿದ ರಿಯಲ್‌ ಮ್ಯಾಡ್ರಿಡ್‌ ಕ್ವಾರ್ಟರ್‌ ಫೈನಲ್ ಪ್ರವೇಶಿಸಿತ್ತು. ಈ ಪಂದ್ಯದ ನಂತರ ಮಾತನಾಡಿದ ಜಿದಾನೆ ‘ಈ ವರೆಗಿನ ಸಾಧನೆ ತೃಪ್ತಿ ನೀಡಿದೆ. ಕೋಚಿಂಗ್‌ನಲ್ಲಿ ಪ್ರತಿ ದಿನ ಖುಷಿ ಕಾಣಲು ಪ್ರಯತ್ನಿಸುತ್ತಿದ್ದೇನೆ. ಅದರ‌‌ಲ್ಲಿ ಸಫಲನಾಗಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry