ಬಿಟ್‌ಕಾಯಿನ್ ವಹಿವಾಟು ಸಮಿತಿಯ ವರದಿ ಸಲ್ಲಿಕೆ

7

ಬಿಟ್‌ಕಾಯಿನ್ ವಹಿವಾಟು ಸಮಿತಿಯ ವರದಿ ಸಲ್ಲಿಕೆ

Published:
Updated:

ನವದೆಹಲಿ: ಡಿಜಿಟಲ್‌ ಕರೆನ್ಸಿ (ಬಿಟ್‌ಕಾಯಿನ್‌) ಬಗ್ಗೆ ಸರ್ಕಾರ ಕಳೆದ ವರ್ಷ ರಚಿಸಿದ್ದ ಸಮಿತಿಯು ತನ್ನ ವರದಿ ಸಲ್ಲಿಸಿದೆ ಎಂದು ಕಾನೂನು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪ್ರತ್ಯೇಕವಾದ ಡಿಜಿಟಲ್‌ ಕರೆನ್ಸಿ ಆರಂಭಿಸುವ ಆಲೋಚನೆಯ ಸಾಧಕ – ಬಾಧಕಗಳನ್ನೂ ಸಮಿತಿ ಪರಿಶೀಲಿಸಿದೆ. ನೋಟು ರದ್ದತಿ ನಂತರ ಕೆಲವರು ತಮ್ಮ ಬಳಿ ಇದ್ದ ಕಪ್ಪು ಹಣವನ್ನು ಡಿಜಿಟಲ್‌ ಕರೆನ್ಸಿಗಳಿಗೆ ವರ್ಗಾಯಿಸಿದ್ದಾರೆ ಎನ್ನುವ ಆರೋಪಗಳ ಕುರಿತೂ ಸರ್ಕಾರ ಗಮನ ಹರಿಸಿದೆ’ ಎಂದು ಕಾನೂನು ವ್ಯವಹಾರ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಎ. ಎನ್‌. ಮಿಶ್ರಾ ಹೇಳಿದ್ದಾರೆ.

ಅನೇಕರು  ತಮ್ಮ ಅಕ್ರಮ ಸಂಪತ್ತನ್ನು ಬಿಟ್‌ಕಾಯಿನ್‌ಗಳಲ್ಲಿ ತೊಡಗಿಸಿದ್ದರಿಂದಲೇ ಇತ್ತೀಚಿನ ದಿನಗಳಲ್ಲಿ ಅವುಗಳ ಬೆಲೆಯಲ್ಲಿ ಹಠಾತ್‌ ಏರಿಕೆ ಕಂಡುಬಂದಿದೆ ಎಂದೂ ಭಾವಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry