ಎಲ್ಲೆಡೆ ಫ್ಲೆಕ್ಸ್‌ ಮುಕ್ತಿ ಎಂದು?

7

ಎಲ್ಲೆಡೆ ಫ್ಲೆಕ್ಸ್‌ ಮುಕ್ತಿ ಎಂದು?

Published:
Updated:
ಎಲ್ಲೆಡೆ ಫ್ಲೆಕ್ಸ್‌ ಮುಕ್ತಿ ಎಂದು?

ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ದಾಂಗುಡಿ ಇಡುತ್ತಿದ್ದ ಫ್ಲೆಕ್ಸ್‌ಗಳು ಈಗ ಹಬ್ಬ–ಹರಿದಿನ, ಪ್ರೀತಿಪಾತ್ರರ ಜನ್ಮದಿನಗಳಲ್ಲಿ ಶುಭ ಕೋರಲು ಬಳಕೆ ಆಗುತ್ತಿವೆ. ಈ ಬಗ್ಗೆ ನಿವಾಸಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

‘ಹಲಸೂರು ಕೆರೆ ರಸ್ತೆಯ ಬಳಿ ‍ಪಾದಚಾರಿ ಮಾರ್ಗದಲ್ಲಿ ಫ್ಲೆಕ್ಸ್‌ ಹಾಕಿದ್ದಾರೆ. ನಾವೆಲ್ಲ ಎಲ್ಲಿ ಓಡಾಡಬೇಕು, ಪಾದಚಾರಿ ಮಾರ್ಗ ಇರುವುದಾದರೂ ಯಾತಕ್ಕೆ, ಹಿರಿಯ ನಾಗರಿಕರು ಏನು ಮಾಡಬೇಕು, ಎಲ್ಲೆಂದರಲ್ಲಿ ಫ್ಲೆಕ್ಸ್‌ ಹಾಕಲು ಇವರಿಗೆ ಅನುಮತಿ ಕೊಟ್ಟವರು ಯಾರು, ಗೋಡೆ ಮೇಲೂ ಮನಬಂದದ್ದನ್ನು ಅಂಟಿಸಿರುತ್ತಾರೆ. ಕೆಲವೊಮ್ಮೆ ಉದ್ಯೋಗ, ಜಾಹೀರಾತಿಗೆ ಸಂಬಂಧಿಸಿದ ಮಾಹಿತಿ ಇರುತ್ತವೆ. ಅವುಗಳ ಮೇಲೆಯೇ ಯಾರಿಗೋ ಶುಭಾಶಯ ಕೋರಿ ಪೋಸ್ಟರ್‌ ಅಂಟಿಸಿರುತ್ತಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ಉಷಾ.

‘ನನಗಂತೂ ಫ್ಲೆಕ್ಸ್‌ಗಳನ್ನು ನೋಡಿ ಸಾಕಾಗಿದೆ. ಇವರು ಹಬ್ಬದ ಶುಭಾಶಯ ಕೋರದಿದ್ದರೆ ಜನ ಹಬ್ಬ ಆಚರಿಸುವುದಿಲ್ಲವೇ? ಯಾವಾಗ ಇವರಿಗೆಲ್ಲ ಹುಚ್ಚು ಬಿಡುತ್ತದೋ ಗೊತ್ತಿಲ್ಲ. ಅವರು ಫ್ಲೆಕ್ಸ್‌ ಹಾಕುವಾಗ ಹಿಡಿದು ನಾಲ್ಕು ಬಾರಿಸುವಷ್ಟು ಸಿಟ್ಟು ಬರುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಈ ಹಾವಳಿ ನಿಲ್ಲುವುದಿಲ್ಲ’ ಎಂದು ಹಿರಿಯ ನಾಗರಿಕ ಸುಬ್ರಹ್ಮಣ್ಯ ತಿಳಿಸಿದರು.

‘ಅದೇ ಹಣವನ್ನು ಪ್ರಯೋಜನಕ್ಕೆ ಬರುವ ಕೆಲಸಕ್ಕೆ ಉಪಯೋಗಿಸಿದರೆ ಅದೆಷ್ಟು ಚೆನ್ನಾಗಿರುತ್ತಿತ್ತು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry