ಮಹಿಳೆಗೆ ಬ್ಲ್ಯಾಕ್‌ಮೇಲ್; ಯುವಕ ಸೆರೆ

7

ಮಹಿಳೆಗೆ ಬ್ಲ್ಯಾಕ್‌ಮೇಲ್; ಯುವಕ ಸೆರೆ

Published:
Updated:

ಬೆಂಗಳೂರು: ‘ನನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ನಿನ್ನ ಬೆತ್ತಲೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್ ಮಾಡುತ್ತೇನೆ’ ಎಂದು ಗೆಳೆಯನ ಪತ್ನಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪದಡಿ ಸುನೀಲ್ ಕುಮಾರ್ ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಸಂತ್ರಸ್ತೆಯು ಪತಿ–ಮಕ್ಕಳೊಂದಿಗೆ ಮೊದಲು ಕಮ್ಮಗೊಂಡನಹಳ್ಳಿಯಲ್ಲಿ ನೆಲೆಸಿದ್ದರು. ಅವರ ಪಕ್ಕದ ಮನೆಯಲ್ಲೇ ನೆಲೆಸಿದ್ದ ಸುನೀಲ್, ಸಂತ್ರಸ್ತೆಯ ಗಂಡನ ಸ್ನೇಹ ಸಂಪಾದಿಸಿದ್ದ. ಗೆಳೆತನದ ನೆಪದಲ್ಲೇ ಆಗಾಗ್ಗೆ ಅವರ ಮನೆಗೆ ಹೋಗಿ ಬರುತ್ತಿದ್ದ ಆತ, ಒಮ್ಮೆ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದ. ಅಲ್ಲದೆ, ತನ್ನ ಮೊಬೈಲ್‌ನಲ್ಲಿ ಅವರ ಫೋಟೊಗಳನ್ನೂ ತೆಗೆದುಕೊಂಡಿದ್ದ ಎನ್ನಲಾಗಿದೆ.

ವರ್ಷದ ಬಳಿಕ ಸಂತ್ರಸ್ತೆ ಕುಟುಂಬ ವಾಸ್ತವ್ಯವನ್ನು ಬೇರೆಡೆ ಬದಲಾಯಿಸಿತು. ಆ ನಂತರವೂ ಅವರನ್ನು ಪೀಡಿಸುತ್ತಿದ್ದ ಆತ, ‘ನನ್ನೊಂದಿಗೆ ಅದೇ ಸಲುಗೆ ಮುಂದುವರಿಸಬೇಕು’ ಎಂದು ಹಳೇ ಫೋಟೊಗಳನ್ನು ಇಟ್ಟುಕೊಂಡು ಬೆದರಿಸುತ್ತಿದ್ದ. ಈ ಕಿರುಕುಳದಿಂದ ಬೇಸತ್ತ ಮಹಿಳೆ, ಬಾಗಲಗುಂಟೆ ಠಾಣೆಗೆ ದೂರು ಕೊಟ್ಟಿದ್ದರು.

‘ವರ್ಷದಿಂದ ಇಬ್ಬರೂ ಸಲುಗೆಯಿಂದ ಇದ್ದೆವು. ಆದರೆ, ಕೆಲ ದಿನಗಳಿಂದ ನನ್ನಿಂದ ಅಂತರ ಬಯಸುತ್ತಿದ್ದಳು. ಹೀಗಾಗಿ, ಆ ರೀತಿ ಬ್ಲ್ಯಾಕ್‌ಮೇಲ್ ಮಾಡಿದ್ದೆ. ವಾಸ್ತವವಾಗಿ ನನ್ನ ಬಳಿ ಅಂಥ ಯಾವುದೇ ಫೋಟೊಗಳು ಇಲ್ಲ’ ಎಂದು ಆರೋಪಿ ಹೇಳಿಕೆ ಕೊಟ್ಟಿದ್ದಾನೆ. ಮೊಬೈಲ್‌ನಲ್ಲಿ ಸಂತ್ರಸ್ತೆಯ ಫೋಟೊ ಕಂಡು ಬಂದಿಲ್ಲ. ಹೆಚ್ಚಿನ ಪರಿಶೀಲನೆಗಾಗಿ ಮೊಬೈಲನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದೇವೆ ಎಂದು ಬಾಗಲಗುಂಟೆ ಪೊಲೀಸರು ತಿಳಿಸಿದ್ದಾರೆ.

ಸುನೀಲ್, ಜಾಲಹಳ್ಳಿಯಲ್ಲಿರುವ ಭಾರತೀಯ ವಾಯುಪಡೆ (ಐಎಎಫ್) ತರಬೇತಿ ಕೇಂದ್ರದಲ್ಲಿ ಸ್ವಚ್ಛತಾ ಕೆಲಸ ಮಾಡಿಕೊಂಡಿದ್ದ. ನ್ಯಾಯಾಲಯದ ಆದೇಶದಂತೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry