ರಂಗನಿರಂತರದಿಂದ ಸಿಜಿಕೆ ಸ್ಮರಣೆ

7

ರಂಗನಿರಂತರದಿಂದ ಸಿಜಿಕೆ ಸ್ಮರಣೆ

Published:
Updated:
ರಂಗನಿರಂತರದಿಂದ ಸಿಜಿಕೆ ಸ್ಮರಣೆ

ಬೆಂಗಳೂರು: ರಂಗಕರ್ಮಿ ಸಿ.ಜಿ.ಕೃಷ್ಣಸ್ವಾಮಿ (ಸಿಜಿಕೆ) ಅವರ ನೆನಪು ಶಾಶ್ವತವಾಗಿಸುವ ಕೆಲಸ ಆಗಬೇಕಿದೆ ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಹೇಳಿದರು.

‘ರಂಗ ನಿರಂತರ’ ವತಿಯಿಂದ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಿಜಿಕೆ 12ನೇ ವರ್ಷದ ಸ್ಮರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿಜಿಕೆ ನನಗೆ ಆತ್ಮೀಯರಾಗಿದ್ದರು. ಅವರ ನಡೆ–ನುಡಿಯನ್ನು ಇಂದಿಗೂ ಅನುಕರಿಸುತ್ತೇನೆ. ಎಲ್ಲರನ್ನೂ ಪ್ರೀತಿಸುತ್ತಿದ್ದ ಅವರು ಸರಳತೆಯಿಂದ, ಸ್ವಾರ್ಥ ರಹಿತವಾಗಿ ಬದುಕಿದ್ದರು’ ಎಂದರು.

‘ರಂಗಭೂಮಿಗೆ ವಿಶಾಲವಾದ ಸಾಂಸ್ಕೃತಿಕ ತಳಹದಿ ಹಾಕಿಕೊಟ್ಟಿದ್ದ ಸಿಜಿಕೆ, ಅದನ್ನೇ ತನ್ನ ಜೀವ ಎಂದು ಭಾವಿಸಿದ್ದರು. ಆಧುನಿಕ ಕನ್ನಡ ರಂಗಭೂಮಿ ಉತ್ಕರ್ಷಕ್ಕೆ ಅವರೇ ಕಾರಣ. ಹೀಗಾಗಿ, ಅವರ ವ್ಯಕ್ತಿತ್ವದ ಕುರಿತು ಗ್ರಂಥ ರಚನೆ ಅಥವಾ ಅವರ ಹೆಸರಿನಲ್ಲಿ ನಿರಂತರವಾಗಿ ಕಾರ್ಯಕ್ರಮಗಳು ನಡೆಯಬೇಕು. ಅದಕ್ಕೆ ನನ್ನಿಂದಾಗುವ ಸಹಾಯ ಮಾಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry