ಉದರ ಸಂಕಟ ನಿವಾರಣೆಗೆ ಸೆನ್ಸರ್‌ ನುಂಗಿ!

7

ಉದರ ಸಂಕಟ ನಿವಾರಣೆಗೆ ಸೆನ್ಸರ್‌ ನುಂಗಿ!

Published:
Updated:
ಉದರ ಸಂಕಟ ನಿವಾರಣೆಗೆ ಸೆನ್ಸರ್‌ ನುಂಗಿ!

ಮೆಲ್ಬರ್ನ್ : ಮನುಷ್ಯನ ಕರುಳಿನಲ್ಲಿ ಸಂಗ್ರಹವಾದ ವಾಯುವಿನ ಮಾಹಿತಿಯನ್ನು ತಕ್ಷಣಕ್ಕೆ ತಿಳಿಯಲು ಹಾಗೂ ಅದರ ನಿವಾರಣೆಗೆ ಅನುವು ಮಾಡಿಕೊಡಲು, ನುಂಗಲು ಸಾಧ್ಯವಿರುವ ಗುಳಿಗೆಯಂತಹ ಸಂವೇದಕವನ್ನು (ಸೆನ್ಸರ್‌) ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಆಸ್ಟ್ರೇಲಿಯಾದ ಆರ್‌ಎಂಐಟಿ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸಿರುವ ಕ್ಯಾಪ್ಸೂಲ್ ಮಾದರಿಯ ಈ ಸಂವೇದಕವು ರೋಗ ನಿವಾರಣೆ ಮಾಡುವುದರ ಜೊತೆಗೆ ದೇಹದೊಳಗಿನ ಕಾರ್ಯವೈಖರಿಯನ್ನೂ ತೆರೆದಿಡಲಿದೆ. ಇದರಿಂದಾಗಿ, ಹೊಟ್ಟೆಯೊಳಗಿನ ಆರೋಗ್ಯ ಸಮಸ್ಯೆ ಗ್ರಹಿಸುವಲ್ಲಿ ಮತ್ತು ಅದಕ್ಕೆ ಚಿಕಿತ್ಸೆ ನೀಡುವ ವಿಧಾನದಲ್ಲಿ ಕ್ರಾಂತಿಕಾರಕ ಬದಲಾವಣೆ ಸಾಧ್ಯ ಎನ್ನಲಾಗಿದೆ.

ವಿಶ್ವದಾದ್ಯಂತ ಪ್ರತಿ ಐವರಲ್ಲಿ ಒಬ್ಬ ವ್ಯಕ್ತಿ ಕರುಳಿನ ಸಮಸ್ಯೆಯಿಂದ ಬಳಲುತ್ತಾರೆ. ಕ್ಷಣಮಾತ್ರದಲ್ಲಿ ಈ ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆಯಲು ಹೊಸ ತಂತ್ರಜ್ಞಾನ ಸಹಕಾರಿಯಾಗಲಿದೆ.

‘ಕರುಳಿನಲ್ಲಿರುವ ಜಲಜನಕ, ಇಂಗಾಲದ ಡೈಆಕ್ಸೈಡ್ ಹಾಗೂ ಆಮ್ಲಜನಕದ ಪ್ರಮಾಣವನ್ನು ಸಂವೇದಕ ಗುರುತಿಸುತ್ತದೆ. ಆ ದತ್ತಾಂಶವನ್ನು ಮೊಬೈಲ್ ಫೋನ್‌ಗೆ ವರ್ಗಾಯಿಸಬಹುದು. ಇಂಥದ್ದೊಂದು ವ್ಯವಸ್ಥೆ ಈ ಮೊದಲು ಇರಲಿಲ್ಲ’ ಎಂದು ಸಂಶೋಧಕ ಕೌರೋಶ್ ಕಲಂತರ್–ಜಡೇಹ್ ಹೇಳಿದ್ದಾರೆ.

ದೊಡ್ಡ ಕರುಳಿನಲ್ಲಿ ಆಮ್ಲಜನಕ ಇರುತ್ತದೆ ಎಂಬ ಸಂಗತಿ ಪ್ರಯೋಗದ ವೇಳೆ ತಿಳಿದುಬಂದಿದೆ. ಈವರೆಗೆ ಕರುಳಿನಲ್ಲಿ ಆಮ್ಲಜನಕ ಇರುವುದಿಲ್ಲ ಎಂದೇ ನಂಬಲಾಗಿತ್ತು.

ನಾರಿನಂಶದ ಆಹಾರವನ್ನು ಹೆಚ್ಚಾಗಿ ಸೇವಿಸುವ ಹಾಗೂ ಕಡಿಮೆ ಪ್ರಮಾಣದ ನಾರಿನಂಶವಿರುವ ಆಹಾರ ಸೇವಿಸುವ ಏಳು ಜನರ ಮೇಲೆ ಪ್ರಯೋಗ ನಡೆಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry