ನಾಮಫಲಕ ಬದಲಾವಣೆಗೆ ತಿಂಗಳ ಗಡುವು

7

ನಾಮಫಲಕ ಬದಲಾವಣೆಗೆ ತಿಂಗಳ ಗಡುವು

Published:
Updated:

ಬೆಂಗಳೂರು: ನಗರದಲ್ಲಿ ಅಂಗಡಿಗಳ ಇಂಗ್ಲಿಷ್ ನಾಮಫಲಕ ಬದಲಾವಣೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ. ಸಿದ್ಧರಾಮಯ್ಯ ಬಿಬಿಎಂಪಿ ಅಧಿಕಾರಿಗಳಿಗೆ ಒಂದು ತಿಂಗಳ ಗಡುವು ನೀಡಿದ್ದಾರೆ.

ಪ್ರಾಧಿಕಾರದ ಕಚೇರಿಯಲ್ಲಿ ಬಿಬಿಎಂಪಿ ಅಧಿಕಾರಿಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(ಬಿಡಿಎ) ಆಯುಕ್ತ ಮತ್ತು ನಗರ ಹೆಚ್ಚುವರಿ ಜಿಲ್ಲಾಧಿಕಾರಿ ಜೊತೆ ಅವರು ಗುರುವಾರ ಸಭೆ ನಡೆಸಿದರು.

ಕೆಲವು ಬಡಾವಣೆಗಳ ಹೆಸರು ಇಂಗ್ಲಿಷ್‌ ರೂಪ ಪಡೆದಿವೆ. ಬಸವನಗುಡಿ ರಸ್ತೆ ಈಗ ಬುಲ್‌ ಟೆಂಪಲ್ ರಸ್ತೆಯಾಗಿದೆ. ನಾಮವಾಚಕ ಪದಗಳನ್ನೂ ಭಾಷಾಂತರ ಮಾಡಿ ಅರ್ಥಗೆಡಿಸುವುದು ಸರಿಯಲ್ಲ. ಈ ರೀತಿ ಹೆಸರು ಬದಲಾಗಿರುವ ಬಡಾವಣೆ ಮತ್ತು ರಸ್ತೆಗಳ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು.

ಕನ್ನಡ ಮಾಧ್ಯಮ ನಡೆಸುವುದಾಗಿ ನಾಗರಿಕ ಸೌಲಭ್ಯ ನಿವೇಶನ (ಸಿ.ಎ) ಪಡೆದು ಇಂಗ್ಲಿಷ್ ಮಾಧ್ಯಮ ನಡೆಸುತ್ತಿರುವ ಏಳು ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಬಿಡಿಎ ಆಯುಕ್ತರಿಗೆ ನಿರ್ದೇಶನ ನೀಡಲಾಯಿತು ಎಂದೂ ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry