ಜೆಎನ್‌ಯು: ನಾಪತ್ತೆಯಾಗಿದ್ದ ಸಂಶೋಧನಾ ವಿದ್ಯಾರ್ಥಿ ಮುಕುಲ್‌ ಜೈನ್‌ ಪತ್ತೆ

7

ಜೆಎನ್‌ಯು: ನಾಪತ್ತೆಯಾಗಿದ್ದ ಸಂಶೋಧನಾ ವಿದ್ಯಾರ್ಥಿ ಮುಕುಲ್‌ ಜೈನ್‌ ಪತ್ತೆ

Published:
Updated:
ಜೆಎನ್‌ಯು: ನಾಪತ್ತೆಯಾಗಿದ್ದ ಸಂಶೋಧನಾ ವಿದ್ಯಾರ್ಥಿ ಮುಕುಲ್‌ ಜೈನ್‌ ಪತ್ತೆ

ನವದೆಹಲಿ: ಇಲ್ಲಿನ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಜ.8ರಂದು ನಾಪತ್ತೆಯಾಗಿದ್ದ ಸಂಶೋಧನಾ ವಿದ್ಯಾರ್ಥಿ ಮುಕುಲ್‌ ಜೈನ್‌ ಗುರುವಾರ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಳೆದ ಸೋಮವಾರ ವಿ.ವಿ ಆವರಣದಿಂದ ತೆರಳಿದ ಬಳಿಕ ಮುಕುಲ್‌ ಜೈನ್‌ ನಾಪತ್ತೆಯಾಗಿದ್ದರು.

‘ಮುಕುಲ್‌ ಜೈನ್‌ ದೆಹಲಿಯಿಂದ ಪಟ್ನಾಗೆ ತೆರಳಿದ್ದರು. ಅವರನ್ನು ಯಾರು ಅಪಹರಣ ಮಾಡಿರಲಿಲ್ಲ’ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

‘ನಾಪತ್ತೆಯಾಗಿದ್ದ ಜೆಎನ್‌ಯು ಸಂಶೋಧನಾ ವಿದ್ಯಾರ್ಥಿ ಸುರಕ್ಷಿತವಾಗಿ ಹಿಂತಿರುಗಿದ್ದಾರೆ. ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು’ ಎಂದು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ(ಜೆಎನ್‌ಯುಎಸ್‌ಯು) ಅಧ್ಯಕ್ಷೆ ಗೀತಾ ಕುಮಾರಿ ತಿಳಿಸಿದ್ದಾರೆ.

ಇದನ್ನೂ ಓದಿ...

ಜೆಎನ್‌ಯು: ಸಂಶೋಧನಾ ವಿದ್ಯಾರ್ಥಿ ಮುಕುಲ್‌ ಜೈನ್‌ ನಾಪತ್ತೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry