100ನೇ ಉಪಗ್ರಹ ಉಡಾವಣೆ ಯಶಸ್ಸು ಇಸ್ರೋ ವಿಜ್ಞಾನಿಗಳ ಅದ್ಭುತ ಸಾಧನೆ: ಮೋದಿ ಶ್ಲಾಘನೆ

7

100ನೇ ಉಪಗ್ರಹ ಉಡಾವಣೆ ಯಶಸ್ಸು ಇಸ್ರೋ ವಿಜ್ಞಾನಿಗಳ ಅದ್ಭುತ ಸಾಧನೆ: ಮೋದಿ ಶ್ಲಾಘನೆ

Published:
Updated:
100ನೇ ಉಪಗ್ರಹ ಉಡಾವಣೆ ಯಶಸ್ಸು ಇಸ್ರೋ ವಿಜ್ಞಾನಿಗಳ ಅದ್ಭುತ ಸಾಧನೆ: ಮೋದಿ ಶ್ಲಾಘನೆ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಿರ್ಮಿಸಿದ 100ನೇ ಉಪಗ್ರಹ ಉಡಾವಣೆ ಶುಕ್ರವಾರ ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಪಿಎಸ್‌ಎಲ್‌ವಿ ಸಿ40 ಯಶಸ್ವಿ ಉಡಾವಣೆ ನಡೆಸಿರುವ ಇಸ್ರೋ ಹಾಗೂ ವಿಜ್ಞಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಹೊಸ ವರ್ಷದ ಈ ಯಶಸ್ಸು ನಮ್ಮ ನಾಗರಿಕರು, ರೈತರು, ಮೀನುಗಾರರು ಸೇರಿದಂತೆ ಮತ್ತಿತರರಿಗೆ ಬಾಹ್ಯಾಕಾಶ ತಂತ್ರಜ್ಞಾನ ದೇಶದ ತ್ವರಿತ ಅಭಿವೃದ್ಧಿಗೆ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

100ನೇ ಉಪಗ್ರಹದ ಉಡಾವಣೆ ಇಸ್ರೋದ ಅದ್ಭುತ ಸಾಧನೆಗೆ ಸಾಕ್ಷಿ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಪ್ರಕಾಶಮಾನವಾದ ಭವಿಷ್ಯ ರೂಪಿಸಿದೆ ಎಂದಿದ್ದಾರೆ.

ಇಂದು ಉಡಾವಣೆಯಾದ 31 ಉಪಗ್ರಹಗಳಲ್ಲಿ, 28 ಇತರ ದೇಶಗಳ ಉಪಗ್ರಹಗಳು ಇವೆ. ಭಾರತದ ಯಶಸ್ಸಿನ ಪ್ರಯೋಜನಗಳು ನಮ್ಮ ಪಾಲುದಾರರಿಗೆ ಲಭ್ಯವಿದೆ! ಎಂದು ಅವರು ಮತ್ತೊಂದು ಟ್ವೀಟ್‌ ಮಾಡಿದ್ದಾರೆ.

ಶ್ರೀಹರಿಕೋಟದ ಸತೀಶ್ ಧವನ್ ಕೇಂದ್ರದಿಂದ ಉಪಗ್ರಹವನ್ನು ಹೊತ್ತ ಧ್ರುವಗಾಮಿ ಉಡಾವಣಾ ವಾಹನವು (ಪಿಎಸ್‌ಎಲ್‌ವಿ ಸಿ40) ಬಾಹ್ಯಾಕಾಶಕ್ಕೆ ಹಾರಿತು.

’ರಾಕೆಟ್ ಕಾರ್ಟೊಸ್ಯಾಟ್–2 ದೂರಸಂವೇದಿ ಉಪಗ್ರಹ, ಸೂಕ್ಷ್ಮ ಉಪಗ್ರಹ, ನ್ಯಾನೊ ಉಪಗ್ರಹ ಹಾಗೂ 28 ವಿದೇಶಿ ನ್ಯಾನೊ ಉಪಗ್ರಹಗಳನ್ನು ಪಿಎಸ್‌ಎಲ್‌ವಿ -ಸಿ40 ಹೊತ್ತೊಯ್ದಿದೆ.

ಇವನ್ನೂ ಓದಿ...

ಇಸ್ರೊ 100ನೇ ಉಪಗ್ರಹ ಉಡಾವಣೆ ಯಶಸ್ವಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry