‘ರೇಸ್‌ 3’ ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್‌ಗೆ ಬೆದರಿಕೆ

7

‘ರೇಸ್‌ 3’ ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್‌ಗೆ ಬೆದರಿಕೆ

Published:
Updated:
‘ರೇಸ್‌ 3’ ಚಿತ್ರದ ಚಿತ್ರೀಕರಣದ ವೇಳೆ ಸಲ್ಮಾನ್‌ಗೆ ಬೆದರಿಕೆ

ಮುಂಬೈ: ನಗರದ ಫಿಲಿಂ ಸಿಟಿಯಲ್ಲಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅಭಿನಯದ ‘ರೇಸ್‌ 3’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬ ಸಲ್ಮಾನ್‌ಗೆ ಬೆದರಿಕೆ ಹಾಕಿದ್ದಾನೆ.

ಗುರುವಾರ ಈ ಘಟನೆ ನಡೆದಿದ್ದು, ಬಳಿಕ ಪೊಲೀಸರು ಭದ್ರತೆಯೊಂದಿಗೆ ಸಲ್ಮಾನ್‌ ಖಾನ್‌ ಅವರನ್ನು ಬಾಂದ್ರಾದ ನಿವಾಸಕ್ಕೆ ಕರೆದೊಯ್ದರು.

ಇತ್ತೀಚಿಗೆ ರಾಜಸ್ಥಾನ ಮೂಲದ ಗ್ಯಾಂಗ್‌ಸ್ಟಾರ್‌ವೊಬ್ಬರು ಸಲ್ಮಾನ್‌ ಅವರಿಗೆ ಬೆದರಿಕೆ ಹಾಕಿದ್ದು ಸುದ್ದಿಯಾಗಿತ್ತು. 

ಈ ಕುರಿತು ಪ್ರತಿಕ್ರಿಯಿಸಿದ ಸಲ್ಮಾನ್‌ ಖಾನ್‌ ಅವರ ತಂದೆ ಸಲೀಂ ಖಾನ್‌, ‘ನನ್ನ ಮಗನಿಗೆ ರಾಜಸ್ಥಾನ ಮೂಲದ ಗ್ಯಾಂಗ್‌ಸ್ಟಾರ್‌ವೊಬ್ಬರಿಂದ ಕೊಲೆ ಬೆದರಿಕೆಗಳು ಕೇಳಿ ಬರುತ್ತಿರುವುದು ನಿಜ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry