ಸತ್ತುಬಿದ್ದ ಹಸು: ಎಚ್ಚೆತ್ತುಕೊಳ್ಳದ ಪುರಸಭೆ

7

ಸತ್ತುಬಿದ್ದ ಹಸು: ಎಚ್ಚೆತ್ತುಕೊಳ್ಳದ ಪುರಸಭೆ

Published:
Updated:

ಮಾಗಡಿ: ಪುರಸಭೆ ಅಂಗಡಿ ಮಳಿಗೆಯೊಂದರಲ್ಲಿ ಬೀದಿ ಹಸುವೊಂದು ಸತ್ತು ಬಿದ್ದು, ಕೊಳೆತು ದುರ್ಗಂಧ ಬೀರುತ್ತಿದೆ. ಇದನ್ನು ತೆರವುಗೊಳಿಸುವಂತೆ ತರಕಾರಿ ಮಾರಾಟಗಾರರು ಆಗ್ರಹಿಸಿದ್ದಾರೆ.

ಪುರಸಭೆ ವತಿಯಿಂದ ನೂರಾರು ಅಂಗಡಿ ಮಳೆಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಕಳಪೆಯಿಂದಾಗಿ ಶಿಥಿಲಗೊಂಡಿವೆ. ಖಾಲಿ ಬಿದ್ದಿರುವ ಅಂಗಡಿ ಮಳಿಗೆಗಳು ಅ್ಯವವಸ್ಥೆಯ ಕೂಪಗಳಾಗಿವೆ. ಕೆಲ ಅಂಗಡಿ ಮಳಿಗೆಗಗಳನ್ನು ದಳ್ಳಾಳಿಗಳ ಮೂಲಕ ಮೂರನೇ ವ್ಯಕ್ತಿಗೆ ಅಂಗಡಿ ಇಟ್ಟುಕೊಳ್ಳಲು ಕೊಟ್ಟು, ಪುರಸಭೆಗೆ ಬರಬೇಕಿದ್ದ ಬಾಡಿಗೆ ದಳ್ಳಾಳಿಗಳ ಪಾಲಾಗುತ್ತಿದೆ ಎಂದು ವರ್ತಕ ಹನುಮಂತಯ್ಯ ದೂರಿದ್ದಾರೆ.

ಸತ್ತ ಹಸುವಿನಿಂದ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ಪುರಸಭೆ ಅಧಿಕಾರಿಗಳು ಮುಂದಾಗಬೇಕು ಎಂದು ಜನಜಾಗೃತಿ ಸಮಿತಿ ಅನಂತರಾಮ್‌ ಸಿಂಗ್‌ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry