ಜೆಡಿಎಸ್‌ ರಾಜ್ಯ ಮಟ್ಟದ ಯುವ ಸಮಾವೇಶ

7

ಜೆಡಿಎಸ್‌ ರಾಜ್ಯ ಮಟ್ಟದ ಯುವ ಸಮಾವೇಶ

Published:
Updated:
ಜೆಡಿಎಸ್‌ ರಾಜ್ಯ ಮಟ್ಟದ ಯುವ ಸಮಾವೇಶ

ಬೀದರ್: ‘ಚಿತ್ರದುರ್ಗ ಜಿಲ್ಲೆ ಹಿರಿಯೂರಲ್ಲಿ ಫೆ.18 ಅಥವಾ 25 ರಂದು ರಾಜ್ಯ ಮಟ್ಟದ ಯುವ ಸಮಾವೇಶ ಆಯೋಜಿಸಿ ಐದು ಲಕ್ಷ ಯುವ ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ಮಾಡಲಾಗುವುದು’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ, ಶಾಸಕ ಮಧು ಬಂಗಾರಪ್ಪ ಹೇಳಿದರು.

‘ರಾಜ್ಯಮಟ್ಟದ ಸಮಾವೇಶಕ್ಕೂ ಮೊದಲು ಜಿಲ್ಲಾ ಮಟ್ಟದ ಸಮಾವೇಶಗಳನ್ನು ನಡೆಸಲಾಗುವುದು. ಯುವಕರಿಂದ ರಾಜಕೀಯದಲ್ಲಿ ಬದಲಾವಣೆ ತರಲು ಸಾಧ್ಯ. ರಾಜ್ಯದಲ್ಲಿ 48 ಲಕ್ಷ ಯುವಕರಿದ್ದಾರೆ. ಜೆಡಿಎಸ್‌ ಯುವ ಶಕ್ತಿಯನ್ನು ಒಗ್ಗೂಡಿಸಲಿದೆ’ ಎಂದು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅಧಿಕಾರ ವಹಿಸಿಕೊಂಡಿರುವ ಅನಂತಕುಮಾರ ಹೆಗಡೆ ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದಾರೆ. ಸಂಸತ್ತಿನಲ್ಲಿ ಕ್ಷಮೆಯಾಚಿಸಿದಾಗಲೂ ಅವರ ದೈಹಿಕ ಭಾಷೆ ಸರಿ ಇರಲಿಲ್ಲ.

ಇಂಥವರಿಗೆ ಪ್ರಧಾನಿ  ನರೇಂದ್ರ ಮೋದಿ ಸಂಸತ್ತಿನ ಒಳಗೆ ಬಿಡಬಾರದು’ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಅವರು ಆಗ್ರಹಿಸಿದರು. ‘ಮುಸ್ಲಿಮರ ಮತ ಬೇಕಾಗಿಲ್ಲ ಎಂದು ಹೇಳಿಕೆ ನೀಡುತ್ತಿರುವ ಅನಂತಕುಮಾರ ಅವರಿಗೆ ಮಾನ, ಮರ್ಯಾದೆ ಇದೆಯೇ’ ಎಂದು ನಗರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಪ್ರಶ್ನಿಸಿದರು.

‘ಸಂವಿಧಾನದಲ್ಲಿ ಎಲ್ಲ ಜಾತಿ, ಸಮುದಾಯದವರಿಗೂ ಸಮಾನತೆ ಕಲ್ಪಿಸಲಾಗಿದೆ. ಆದರೆ, ಇಂದು ಜಾತಿಯ ಹೆಸರಿನಲ್ಲೇ ರಾಜಕೀಯ ನಡೆದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry