ಯೋಗಿ ಆದಿತ್ಯನಾಥಗೆ ಕಾಂಗ್ರೆಸ್ ಮಾಡಿಕೊಟ್ಟ ಹೊಸ ರೆಸಿಪಿ #RecipeforDisaster

7

ಯೋಗಿ ಆದಿತ್ಯನಾಥಗೆ ಕಾಂಗ್ರೆಸ್ ಮಾಡಿಕೊಟ್ಟ ಹೊಸ ರೆಸಿಪಿ #RecipeforDisaster

Published:
Updated:
ಯೋಗಿ ಆದಿತ್ಯನಾಥಗೆ ಕಾಂಗ್ರೆಸ್ ಮಾಡಿಕೊಟ್ಟ ಹೊಸ ರೆಸಿಪಿ #RecipeforDisaster

ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ವಿರುದ್ಧದ ಆರೋಪಗಳ ಪಟ್ಟಿಯನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ತಯಾರಿಸಿರುವ ‘ರೆಸಿಪಿ‘ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

#RecipeforDisaster ಎಂಬ ಹೆಸರಿನಲ್ಲಿ ಕಾಂಗ್ರೆಸ್ ವಿಡಿಯೊವನ್ನು ಬಿಡುಗಡೆ ಮಾಡಿದೆ. ಉತ್ತರ ಪ್ರದೇಶದಲ್ಲಿ ಕೋಮು ಸಾಮರಸ್ಯ ಹಾಳು ಮಾಡಿರುವ ಯೋಗಿ ಆದಿತ್ಯಾನಾಥ ಅವರು ಕರ್ನಾಟಕದಲ್ಲೂ ಕೋಮುವಾದವನ್ನು ಬಿತ್ತಲು ಬರುತ್ತಿದ್ದಾರೆ ಎಂಬ ಆರೋಪವನ್ನು ಈ ವಿಡಿಯೊದಲ್ಲಿ ಮಾಡಲಾಗಿದೆ.

ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಅವರು ಬಿಜೆಪಿಯ ತಾರಾ ಪ್ರಚಾರಕರಾಗಿರುವುದರಿಂದ ಕಾಂಗ್ರೆಸ್ ಈ ಆರೋಪ ಮಾಡಿದೆ.

#RecipeforDisaster ರೆಸಿಪಿಯಲ್ಲಿ ಅಪರಾಧ ಪ್ರಕರಣಗಳು 1 ಕೆ. ಜಿ, ಕೇಸರಿ ನೀರು 1 ಲೀಟರ್, ಮೊಸಳೆ ಕಣ್ಣೀರು 1/2 ಕಪ್‌ ಸೇರಿದಂತೆ ಗೋಹತ್ಯೆ ನಿಷೇಧ, ಶಾಲೆ ಮತ್ತು ಹಜ್‌ ಭವನದ ಗೋಡೆಯ ಕೇಸರಿಮಯ ಮಾಡಿರುವುದನ್ನು ಬಳಸಿಕೊಂಡು ರೆಸಿಪಿ ತಯಾರಿಸಿದೆ. ವಿಡಿಯೊ ಕೊನೆಯಲ್ಲಿ  ‘Recipe for Disaster coming soon your state (karnataka)‘ ಎಂದು ಬರೆಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry