ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಂಕಟೇಶ್‌ ಕುಮಾರ್ ಕಛೇರಿ ಇಂದು

Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಭಾರತೀಯ ಕಲೆಗಳಿಗೆ ಮತ್ತು ಕಲಾಸಕ್ತರಿಗೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಆರಂಭವಾದ ಸಂಸ್ಥೆ ‘ಹೂವು ಫೌಂಡೇಷನ್‌’. ನಟಿ, ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಅವರು ಹೂವು ಫೌಂಡೇಷನ್‌ ಸಾರಥ್ಯ ವಹಿಸಿದ್ದಾರೆ. ಸಂಸ್ಥೆಯು ‘ಭಾವಾಂಗನ’ ಶೀರ್ಷಿಕೆಯಡಿ ಜನವರಿಯಿಂದ ಮೇವರೆಗೆ ಪ್ರತಿ ತಿಂಗಳ ಎರಡನೇ ಶನಿವಾರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದೆ.

‘ಭಾವಾಂಗನ’ದಲ್ಲಿ ಶನಿವಾರ (ಜ.13) ಪಿ.ವೆಂಕಟೇಶ್‌ಕುಮಾರ್‌ ಅವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.  ಮುಂದಿನ ದಿನಗಳಲ್ಲಿ ಗಜಲ್‌ ಸಂಗೀತಗಾರ ಜಾಂಝಿ ಶರ್ಮ, ವಯಲಿನ್‌ ವಾದಕ ದೀಪಕ್ ಪಂಡಿತ್, ಕರ್ನಾಟಕ ಸಂಗೀತಗಾರ್ತಿ ನಿತ್ಯಶ್ರೀ, ಕಥಕ್‌ ನೃತ್ಯಗಾರ್ತಿ ಮಹುವ ಶಂಕರ್‌, ಸೌಂದರ್ಯ ಶ್ರೀವತ್ಸ ಮೊದಲಾದವರು ಕಾರ್ಯಕ್ರಮ ನೀಡಲಿದ್ದಾರೆ.

(ಭಾವನಾ ರಾಮಣ್ಣ)

‘ಹೂವು ಫೌಂಡೇಷನ್‌’ ನಟಿ ಭಾವನಾ ರಾಮಣ್ಣ ಅವರ ಕನಸಿನ ಕೂಸು. ಭಾವನಾ ಅವರ ಅಪ್ಪ– ಅಮ್ಮ ಸಂಗೀತದಲ್ಲಿ ಆಸಕ್ತಿ ಇದ್ದವರು.  ತಮ್ಮ ಇಬ್ಬರು ಮಕ್ಕಳಾದ ಭಾವನಾ ಹಾಗೂ ಅರವಿಂದ ರಾಮಣ್ಣ ಅವರು ಕಲಾಲೋಕದಲ್ಲಿ ಸಾಧನೆ ಮಾಡಬೇಕು ಎಂಬುದು ಪೋಷಕರ ಆಸೆಯಾಗಿತ್ತು. ಭಾವನಾ ಭರತನಾಟ್ಯ ನೃತ್ಯಗಾರ್ತಿ ಹಾಗೂ ನಟಿಯಾಗಿ ಪ್ರಸಿದ್ಧರಾಗಿದ್ದಾರೆ. ಅರವಿಂದ ಅವರು ಹೋಮ್‍ಟೌನ್ ಪ್ರೊಡಕ್ಷನ್ಸ್ ನಡೆಸುತ್ತಿದ್ದಾರೆ.

ಹೂವು ಫೌಂಡೇಷನ್‌ ಕಳೆದ ಮೂರು ವರ್ಷಗಳಿಂದ ಹಲವು ಕಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ. ನಗರದ ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದ ಸಮೀಪದ ಸರ್ಕಾರಿ ಕಲಾ ವಿದ್ಯಾಲಯದ ಆವರಣದಲ್ಲಿ ಸ್ವಂತ ಖರ್ಚಿನಲ್ಲಿ ಅಮ್ಮ ಶಕುಂತಲಾ ಅವರ ಹೆಸರಿನಲ್ಲಿ ₹60 ಲಕ್ಷ ಬಯಲು ರಂಗಮಂಟಪ ನಿರ್ಮಿಸಲಾಗುತ್ತಿದೆ.

ಈ ಹಿಂದೆ ಶಕುಂತಲಾ ಅವರ ನೆನಪಿನಲ್ಲಿ ‘ಮಾತೃನಮನ’ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಸಾಂಸ್ಕೃತಿಕ ಲೋಕದಲ್ಲಿ ಅಗಾಧ ಸಾಧನೆ ಮಾಡಿ, ಹಣಕಾಸಿನ ಸಮಸ್ಯೆಗಳಿಂದ ಬಳಲುತ್ತಿರುವ ಕಲಾವಿದರೊಬ್ಬರನ್ನು ಗುರುತಿಸಿ ₹5 ಲಕ್ಷ ಹಾಗೂ ಯುವ ಸಾಧಕರಿಗೆ ₹1 ಲಕ್ಷ ಪ್ರಶಸ್ತಿ ನೀಡಲಾಗಿತ್ತು. ಹಣಕಾಸಿನ ತೊಂದರೆಯಿಂದ ಈ ಕಾರ್ಯಕ್ರಮ ಸ್ಥಗಿತಗೊಂಡಿದ್ದು, ಮುಂದಿನ ವರ್ಷಗಳಲ್ಲಿ ಪುನಃ ಆರಂಭಿಸುವ ಉದ್ದೇಶ ಸಂಸ್ಥೆಗೆ ಇದೆ.

‘ಬೇರೆಬೇರೆ ಕಲಾ ಪ್ರಕಾರಗಳಲ್ಲಿ ಆಸಕ್ತಿಯಿರುವ ಬಡ ಪ್ರತಿಭೆಗಳನ್ನು ಗುರುತಿಸಿ, ಅವರಲ್ಲಿರುವ ಕಲೆಯನ್ನು ಹೊರಜಗತ್ತಿಗೆ ಪರಿಚಯಿಸುವುದು, ಅಶಕ್ತ ಕಲಾವಿದರಿಗೆ ಹಣಕಾಸು ನೆರವ ಕಾರ್ಯದಲ್ಲಿ ಸಂಸ್ಥೆ ತೊಡಗಿಸಿಕೊಂಡಿದೆ. ಈಗಾಗಲೇ ನಾಲ್ಕು ಮಕ್ಕಳಿಗೆ ಭರತನಾಟ್ಯ ಕಲಿಯಲು ಆರ್ಥಿಕ ಸಹಾಯ ನೀಡಿದ್ದೇವೆ’ ಎಂಬುದು ಫೌಂಡೇಷನ್‌ನ ಅರವಿಂದ್‌ ರಾಮಣ್ಣ ಅವರ ಮಾತು. ಸದಭಿರುಚಿಯ, ಹೊಸ ಚಿಂತನೆಗಳಿಂದ ಕೂಡಿದ ಕನ್ನಡ ಸಿನಿಮಾ ನಿರ್ಮಾಣದ ಆಶಯವೂ ಫೌಂಡೇಶನ್‌ಗೆ ಇದೆ.

ಸಂಪರ್ಕ ಸಂಖ್ಯೆ– 98455 03987.

**

ಕಾರ್ಯಕ್ರಮದ ವಿವರ

ಪದ್ಮಶ್ರೀ ಪಂಡಿತ್‌ ವೆಂಕಟೇಶ್‌ಕುಮಾರ್‌ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ: ಮೃದಂಗ– ಉದಯ್‌ ರಾಜ್‌ ಕಪೂರ್‌, ಹಾರ್ಮೋನಿಯಂ– ವ್ಯಾಸಮೂರ್ತಿ ಕಟ್ಟಿ. ಸ್ಥಳ–  ಶಕುಂತಲಾ ರಂಗಮಂದಿರ, ಸರ್ಕಾರಿ ಕಲಾ ವಿದ್ಯಾಲಯದ ಆವರಣ, ನಗರದ ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದ ಸಮೀಪ. ಶನಿವಾರ ಸಂಜೆ 6.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT