ಚಿಲ್ಲರೆ ಹಣದುಬ್ಬರ ಶೇ 5.21ಕ್ಕೆ ಏರಿಕೆ

5

ಚಿಲ್ಲರೆ ಹಣದುಬ್ಬರ ಶೇ 5.21ಕ್ಕೆ ಏರಿಕೆ

Published:
Updated:

ನವದೆಹಲಿ (ಪಿಟಿಐ): ಚಿಲ್ಲರೆ ಹಣದುಬ್ಬರವು ಆರ್‌ಬಿಐ ನಿರೀಕ್ಷೆಯನ್ನೂ ಮೀರಿ (ಶೇ 4) ಏರಿಕೆ ಕಾಣುತ್ತಿದೆ. ಡಿಸೆಂಬರ್‌ನಲ್ಲಿ ಶೇ 5.21ಕ್ಕೆ ತಲುಪಿದೆ.

ಇದರಿಂದ ಮುಂಬರುವ ದಿನಗಳಲ್ಲಿ ಆರ್‌ಬಿಐ ಬಡ್ಡಿದರ ಕಡಿತ ಮಾಡುವ ನಿರೀಕ್ಷೆ ತಗ್ಗಿದೆ ಎಂದು ಕೇಂದ್ರೀಯ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಚಿಲ್ಲರೆ ಹಣದುಬ್ಬರ 2017ರ ನವೆಂಬರ್‌ನಲ್ಲಿ ಶೇ 4.88 ರಷ್ಟಿತ್ತು. 2016ರ ಡಿಸೆಂಬರ್‌ನಲ್ಲಿ ಶೇ 3.41ರಷ್ಟಿತ್ತು. ಆಹಾರ ಉತ್ಪನ್ನಗಳು, ತರಕಾರಿ ತುಟ್ಟಿಯಾಗಿರುವುದರಿಂದ ಚಿಲ್ಲರೆ ಹಣದುಬ್ಬರ ಏರಿಕೆ ಕಂಡಿದೆ. ಚಿಲ್ಲರೆ ಹಣದುಬ್ಬರವನ್ನು ಶೇ 4 ರ ಆಸುಪಾಸಿನಲ್ಲಿ ಶೇ 2 ರಷ್ಟು ಹೆಚ್ಚು ಅಥವಾ ಕಡಿಮೆ ಇರುವಂತೆ ನೋಡಿಕೊಳ್ಳಲು ಸರ್ಕಾರವು ಆರ್‌ಬಿಐಗೆ ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry