ಮುಂದುವರಿದ ದಾಖಲೆ ಓಟ

7

ಮುಂದುವರಿದ ದಾಖಲೆ ಓಟ

Published:
Updated:

ಮುಂಬೈ : ದೇಶದ ಷೇರುಪೇಟೆಗಳಲ್ಲಿ ಪ್ರತಿ ದಿನವೂ ದಾಖಲೆ ಮಟ್ಟದ ವಹಿವಾಟು ನಡೆಯುತ್ತಿದೆ.

ಮೂರನೇ ತ್ರೈಮಾಸಿಕದಲ್ಲಿ ಟಿಸಿಎಸ್‌ ನಿವ್ವಳ ಲಾಭ ಅಲ್ಪ ಇಳಿಕೆ ಕಂಡಿದ್ದರೂ ಕಂಪನಿಗಳ ಆರ್ಥಿಕ ಸಾಧನೆ ಉತ್ತಮವಾಗಿರಲಿದೆ ಎನ್ನುವುದು ಹೂಡಿಕೆದಾರರ ವಿಶ್ವಾಸ. ಹೀಗಾಗಿ ಷೇರುಪೇಟೆಯಲ್ಲಿ ಬಂಡವಾಳ ಹರಿವು ಹೆಚ್ಚಾಗುತ್ತಿದ್ದು, ವಹಿವಾಟು ಗರಿಷ್ಠ ಮಟ್ಟವನ್ನು ತಲುಪುತ್ತಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ಶುಕ್ರವಾರ 89 ಅಂಶ ಹೆಚ್ಚಾಗಿ 34,592 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ಗುರುವಾರದ ವಹಿವಾಟಿನಲ್ಲಿ  ಇದ್ದ 34,503  ಅಂಶಗಳ ಗರಿಷ್ಠ ಮಟ್ಟವನ್ನು ಹಿಂದಿಕ್ಕಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 30 ಅಂಶ ಏರಿಕೆ ಕಂಡು, 10,681 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry