ರಿಲಯನ್ಸ್‌ ‘ಜಿಯೊಕಾಯಿನ್‌’?

7

ರಿಲಯನ್ಸ್‌ ‘ಜಿಯೊಕಾಯಿನ್‌’?

Published:
Updated:

ಮುಂಬೈ: ಆಕರ್ಷಕ ಉಚಿತ ಕೊಡುಗೆ ಮತ್ತು ಸ್ಪರ್ಧಾತ್ಮಕ ದರಗಳ ಮೂಲಕ ದೂರಸಂಪರ್ಕ ವಲಯದಲ್ಲಿ ಸಂಚಲನ ಮೂಡಿಸಿದ್ದ ರಿಲಯನ್ಸ್‌ ಜಿಯೊ ಇನ್ಫೊಕಾಂ, ತನ್ನದೇ ಆದ ಡಿಜಿಟಲ್‌ ಕರೆನ್ಸಿ ‘ಜಿಯೊಕಾಯಿನ್‌’ ಸೃಷ್ಟಿಸಲು ಮುಂದಾಗಿದೆ.

ಮುಕೇಶ್ ಅಂಬಾನಿ ಅವರ ಹಿರಿಯ ಮಗ ಆಕಾಶ್‌ ಅಂಬಾನಿ ಅವರು ಈ ‘ಜಿಯೊ ಕಾಯಿನ್‌’ ಯೋಜನೆಯ ನೇತೃತ್ವವಹಿಸಿದ್ದಾರೆ.

ಡಿಜಿಟಲ್‌ ಕರೆನ್ಸಿ ಸೃಷ್ಟಿಸಲು ಬಳಕೆಯಾಗುವ ‘ಬ್ಲಾಕ್ ಚೈನ್’ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ 50 ಮಂದಿ ಯುವ ತಂತ್ರಜ್ಞರನ್ನು ತೊಡಗಿಸಲು ಸಂಸ್ಥೆ ಉದ್ದೇಶಿಸಿದೆ. ಡಿಜಿಟಲ್‌ ಕರೆನ್ಸಿಯಷ್ಟೇ ಅಲ್ಲದೇ ಬ್ಲಾಕ್‌ ಚೈನ್‌ ತಂತ್ರ‌ಜ್ಞಾನದಡಿ ವಿವಿಧ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲೂ ಉದ್ದೇಶಿಸಲಾಗಿದೆ. ಈ ತಂತ್ರಜ್ಞಾನದಡಿ ದತ್ತಾಂಶವನ್ನು ಸರ್ವರ್‌ಗಳಲ್ಲಿ ಸಂಗ್ರಹಿಸಿ ಇಡಲಾಗುವುದಿಲ್ಲ. ಇದಕ್ಕೆ ಕ್ಲೌಡ್‌ ತಂತ್ರಜ್ಞಾನ ಬಳಸುವುದರಿಂದ ಅನಿಯಮಿತ ದತ್ತಾಂಶವನ್ನು ಸುಲಭವಾಗಿ ಸಂಗ್ರಹಿಸಿ ಇಡಬಹುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry