ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರ ಉಷ್ಣತೆಯ 5 ಹೊಸ ಗ್ರಹ ಪತ್ತೆ

Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಬಾಸ್ಟನ್ : ಭೂಮಿಯಿಂದ 620 ಜ್ಯೋತಿರ್ವರ್ಷ ದೂರದಲ್ಲಿರುವ ಐದು ಹೊಸ ಗ್ರಹಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕದ ಮಾಹಿತಿ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ.

ನಕ್ಷತ್ರವೊಂದರ ಸುತ್ತ ಗಿರಕಿ ಹೊಡೆಯುತ್ತಿರುವ ಈ ಐದೂ ಗ್ರಹಗಳನ್ನು ಸೂಪರ್‌ ಅರ್ಥ್ಸ್‌ ಎಂದು ಕರೆಯಲಾಗಿದೆ. ಏಕೆಂದರೆ ಗಾತ್ರದಲ್ಲಿ ಇವು ಭೂಮಿಗಿಂತಲೂ ಎರಡರಿಂದ ಮೂರು ಪಟ್ಟು ದೊಡ್ಡದಾಗಿವೆ ಎಂದು ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.

ಐದೂ ಗ್ರಹಗಳು ಕೆಂಡದಂತಹ ಬಿಸಿಯಿಂದ ಕೂಡಿವೆ. ಎಲ್ಲವೂ ಮಾತೃನಕ್ಷತ್ರಕ್ಕೆ ತೀರಾ ಸನಿಹದಲ್ಲಿದ್ದು, ಕೇಂದ್ರೀಕೃತ ವಲಯದಲ್ಲಿ ಸುತ್ತುತ್ತಿವೆ. ಹೀಗಾಗಿ ಇದು ಬಿಗಿಯಾಗಿ ಸೌರಮಂಡಲವಾಗಿದೆ. ಅಂದರೆ ಅಂಡಾಕಾರದಲ್ಲಿರುವ ನಮ್ಮ ಸೌರಮಂಡಲಕ್ಕಿಂತ ಭಿನ್ನವಾಗಿದೆ.

ಈ ಗ್ರಹಗಳನ್ನು ಪತ್ತೆಹಚ್ಚಿರುವ ಮುಖ್ಯ ಶ್ರೇಯ ನಾಗರಿಕ ವಿಜ್ಞಾನಿಗಳಿಗೆ (ಸಿಟಿಜನ್ ಸೈಂಟಿಸ್ಟ್ಸ್‌) ಸಲ್ಲಬೇಕು ಎಂದು ಸಂಶೋಧಕರು ಹೇಳಿದ್ದಾರೆ. ಇವರು ಜಗತ್ತಿನಾದ್ಯಂತ ಸುಮಾರು 10 ಸಾವಿರ ಜನರಿದ್ದಾರೆ. ಸಾರ್ವಜನಿಕವಾಗಿ ಲಭ್ಯವಿರುವ ಕೆ–2 ಮಾಹಿತಿ ಹಾಗೂ ಕೆಪ್ಲರ್ ದೂರದರ್ಶಕದ ದತ್ತಾಂಶಗಳನ್ನು ಸಂಗ್ರಹಿಸಿ ಭೂಮಿಯನ್ನು ಹೋಲುವ ಗ್ರಹಗಳಿಗಾಗಿ 2009ರಿಂದ ಇವರು ಅಧ್ಯಯನ ನಡೆಸುತ್ತಿದ್ದಾರೆ. Zooniverse ಎಂಬ ವೇದಿಕೆಯಡಿ ಇವರು ಕೆಲಸ ಸಂಶೋಧನೆಯಲ್ಲಿ ತೊಡಗಿದ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT