‘ಅಂದು ಅಜಿಂಕ್ಯ ರಹಾನೆ ಬೇಡ ಎಂದವರು ಈಗ ಬೇಕೆನ್ನುತ್ತಾರೆ’

7

‘ಅಂದು ಅಜಿಂಕ್ಯ ರಹಾನೆ ಬೇಡ ಎಂದವರು ಈಗ ಬೇಕೆನ್ನುತ್ತಾರೆ’

Published:
Updated:

ಸೆಂಚೂರಿಯನ್‌: ’ಮೊದಲ ಟೆಸ್ಟ್‌ನಿಂದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ಹೊರಗಿಡಬೇಕು ಎಂದು ಬಯಸಿದವರು ಈಗ ಅವರು ತಂಡದಲ್ಲಿ ಇರಬೇಕು ಎನುತ್ತಿದ್ದಾರೆ. ಒಂದು ವಾರದ ಅವಧಿಯಲ್ಲಿ ಜನರ ಮನಸ್ಸು ಈ ರೀತಿ ಬದಲಾಗಲು ಸಾಧ್ಯವೇ...?

ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಕೇಳಿದ ಪ್ರಶ್ನೆ ಇದು. ರಹಾನೆ ಅತ್ಯುತ್ತಮ ಆಟಗಾರ. ದಕ್ಷಿಣ ಆಫ್ರಿಕಾದಲ್ಲಿ ಅವರು ಉತ್ತಮ ದಾಖಲೆ ಹೊಂದಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಆಟಗಾರ. ಆದರೂ ಅವರನ್ನು ತಂಡದಿಂದ ಹೊರ ಗಿಡಲಾಯಿತು. ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿ ಇರುವುದರಿಂದ ಆಯ್ಕೆಯಾದರು’ ಎಂದು ಕೊಹ್ಲಿ ವಿವರಿಸಿದರು.

ಪ್ಲೆಸಿಗೆ ಅಚ್ಚರಿ ತಂದ ಕಂದು ಬಣ್ಣದ ಪಿಚ್‌: ಇಲ್ಲಿ ಸಿದ್ಧಪಡಿಸಿರುವ ಕಂದು ಬಣ್ಣದ ಪಿಚ್‌ ಆತಿಥೇಯ ತಂಡದ ನಾಯಕ ಫಾಫ್‌ ಡು ಪ್ಲೆಸಿಗೆ ಅಚ್ಚರಿ ಮೂಡಿಸಿತು. ಆದರೆ ಭಾರತದ ನಾಯಕ ವಿರಾಟ್‌ ಕೊಹ್ಲಿ ‘ಇದು ಅತ್ಯುತ್ತಮ ಪಿಚ್’ ಎಂದು ಹೇಳಿ ನಿರಾಳವಾದರು.

ಪಿಚ್‌ನಲ್ಲಿ ಕಂದು ಬಣ್ಣದ ಹುಲ್ಲು ಹಾಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಪ್ಲೆಸಿ ‘ಪೇಸ್ ಮತ್ತು ಬೌನ್ಸ್‌ ಇರುವ ಪಿಚ್‌ ಸಿದ್ಧಗೊಂಡಿದೆ ಎಂದು ತಿಳಿದುಕೊಂಡಿದ್ದೆ. ಆದರೆ ಪಿಚ್‌ನ ಮರ್ಮ ಏನೆಂದು ಹೇಳಲು ಸಾಧ್ಯವಾಗದ ಸ್ಥಿತಿ ಈಗ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry