ಟೆನಿಸ್: ಆರ್ಯನ್–ಅರ್ನವ್ ಜೋಡಿಗೆ ಪ್ರಶಸ್ತಿ

7

ಟೆನಿಸ್: ಆರ್ಯನ್–ಅರ್ನವ್ ಜೋಡಿಗೆ ಪ್ರಶಸ್ತಿ

Published:
Updated:

ಮೈಸೂರು: ನಗರದ ಆರ್ಯನ್ ಮತ್ತು ಅರ್ನವ್ ಪತಂಗೆ ಸಹೋದರರು ಇಲ್ಲಿ ನಡೆದ ಕೆಟಿಪಿಪಿಎ–ಎಂಟಿಸಿ ಎಐಟಿಎ ಟೆನಿಸ್ ಟೂರ್ನಿಯ ಬಾಲಕರ ಡಬಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡರು.

ಮೈಸೂರು ಟೆನಿಸ್ ಕ್ಲಬ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪತಂಗೆ ಜೋಡಿ 6–3, 6–2 ರಲ್ಲಿ ಕೇರಳದ ಜಿ.ಎಸ್.ಸಂಜಯ್ ಮತ್ತು ಅಜಿತ್ ಕುಮಾರ್ ವಿರುದ್ಧ ಜಯಗಳಿಸಿತು.

ಬಾಲಕಿಯರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಮಧ್ಯಪ್ರದೇಶದ ಪಿ.ಯಶಸ್ವಿನಿ ಸಿಂಗ್ ಮತ್ತು ತೆಲಂಗಾಣದ ಸಂಜನಾ ಸಿರಿಮಲ್ಲ ಜೋಡಿ 6–2, 4–6, 10–6 ರಲ್ಲಿ ಸಾಗರಿಕಾ ಸೋನಿ ಮತ್ತು ಖಷಿ ಸಂತೋಷ್ ವಿರುದ್ಧ ಗೆದ್ದಿತು.

ಯಶಸ್ವಿನಿ ಮತ್ತು ಸಂಜನಾ ಅವರು ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದಾರೆ. ಸೆಮಿಫೈನಲ್ ಪಂದ್ಯಗಳಲ್ಲಿ ಯಶಸ್ವಿನಿ 6–3, 7–6 ರಲ್ಲಿ ಕರ್ನಾಟಕದ ಖುಷಿ ಸಂತೋಷ್ ಮೇಲೂ, ಸಂಜನಾ 6–0, 6–3 ರಲ್ಲಿ ತಮಿಳುನಾಡಿನ ಜಿ.ಯಶೋಮತಿ ಎದುರೂ ಜಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry