‘ಮಾರಿಷಸ್‌ನ ಸ್ವಾತಂತ್ರೋತ್ಸವಕ್ಕೆ ಮೋದಿಗೆ ಆಹ್ವಾನ’

7

‘ಮಾರಿಷಸ್‌ನ ಸ್ವಾತಂತ್ರೋತ್ಸವಕ್ಕೆ ಮೋದಿಗೆ ಆಹ್ವಾನ’

Published:
Updated:

ಬೆಂಗಳೂರು: ಮಾರ್ಚ್‌ 12ರಂದು ಮಾರಿಷಸ್‌ನ 50ನೇ ಸ್ವಾತಂತ್ರೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬರುವಂತೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಲಾಗುವುದು ಎಂದು ಅಲ್ಲಿನ ಉಪ ರಾಷ್ಟ್ರಪತಿ ಪರಮಶಿವಂ ಪಿಳ್ಳೈ ಹೇಳಿದರು.

ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಲಯದಲ್ಲಿ ಶನಿವಾರ ನಡೆಯಲಿರುವ ಕೃಷಿ ಉತ್ಸವದಲ್ಲಿ ಭಾಗವಹಿಸಲು ಬಂದಿರುವ ಅವರು, ಶುಕ್ರವಾರ ವಿಧಾನಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರನ್ನು ಭೇಟಿ ಮಾಡಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಸಿಲಿಕಾನ್‌ ಸಿಟಿ ಬೆಂಗಳೂರಿನ ಐಟಿ ವಲಯದ ಸಹಯೋಗದಲ್ಲಿ ಕೆಲಸ ಮಾಡಲು ನಮ್ಮ ದೇಶ ಉತ್ಸುಕವಾಗಿದೆ. ಅಲ್ಲದೆ, ವೈದ್ಯಕೀಯ, ಪ್ರವಾಸೋದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲೂ ಹೂಡಿಕೆ ಮಾಡಲು ಬಯಸಿದೆ’ ಎಂದರು.ಇಂದಿರಾಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಸಿಕೊಂಡ ಅವರು, ‘ವಾಜಪೇಯಿ ಅವರು ಭೇಟಿ ನೀಡಿದ ಬಳಿಕ ಭಾರತದೊಂದಿಗಿನ ನಮ್ಮ ದೇಶದ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ಮಾರಿಷಸ್‌ನಲ್ಲಿರುವ ಶೇ 50ರಷ್ಟು ಜನ ಭಾರತೀಯರು’ ಎಂದರು.

‘ನಮ್ಮಲ್ಲೂ ಶಿವರಾತ್ರಿ, ಗಣೇಶ ಚತುರ್ಥಿ, ದೀಪಾವಳಿ, ಪೊಂಗಲ್ ಹಬ್ಬ ಆಚರಿಸುತ್ತೇವೆ‌’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry