ಡಿಎಂಕೆ ಸಂಸದೆ ಕನಿಮೊಳಿ ವಿರುದ್ಧ ದೂರು ದಾಖಲು

7

ಡಿಎಂಕೆ ಸಂಸದೆ ಕನಿಮೊಳಿ ವಿರುದ್ಧ ದೂರು ದಾಖಲು

Published:
Updated:
ಡಿಎಂಕೆ ಸಂಸದೆ ಕನಿಮೊಳಿ ವಿರುದ್ಧ ದೂರು ದಾಖಲು

ಹೈದರಾಬಾದ್‌: ತಿರುಚಿನಾಪಳ್ಳಿಯಲ್ಲಿ ‘ದ್ರಾವಿಡ ಕಳಗಂ’ ಆಯೋಜಿಸಿದ್ದ ವಿಶ್ವ ನಾಸ್ತಿಕ ಸಮ್ಮೇಳನದಲ್ಲಿ ತಿರುಮಲ ವೆಂಕಟೇಶ್ವರ ದೇವರ ಬಗ್ಗೆ ಟೀಕೆ ಮಾಡಿರುವ ಡಿಎಂಕೆ ಸಂಸದೆ ಕನಿಮೊಳಿ ವಿರುದ್ಧ ಹೈದರಾಬಾದ್‌ನಲ್ಲಿ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

ಸಮ್ಮೇಳನದಲ್ಲಿ ಭಾಷಣ ಮಾಡಿದ್ದ ಕನಿಮೊಳಿ, ‘ವೆಂಕಟೇಶ್ವರ ದೇವರೆಂದರೆ ಏನು? ಆತ ಶ್ರೀಮಂತರಿಗೆ ಮಾತ್ರ ದೇವರು. ಬಡ ಭಕ್ತರು ಸುದೀರ್ಘವಾದ ಸಾಲುಗಳಲ್ಲಿ ಮಲಗಿ ನಿದ್ರಿಸುತ್ತಿದ್ದಾರೆ. ತನ್ನ ಸ್ವಂತ ಹುಂಡಿಯನ್ನು ರಕ್ಷಿಸಿಕೊಳ್ಳಲಾಗದವನು ಭಕ್ತರನ್ನು ಹೇಗೆ ರಕ್ಷಿಸುತ್ತಾನೆ. ವೆಂಕಟೇಶ್ವರ ನಿಜವಾದ  ಶಕ್ತಿವಂತ ದೇವರಾಗಿದ್ದರೆ ಆತನಿಗೆ ರಕ್ಷಣೆ ಯಾಕೆ ಬೇಕು’ ಎಂದು ಪ್ರಶ್ನಿಸಿದ್ದರು.

ವೆಂಕಟೇಶ್ವರನನ್ನು ಕಲಿಯುಗದ ದೇವರು ಎಂದು ನಂಬಿರುವ ಕೋಟ್ಯಂತರ ಹಿಂದೂಗಳ ಧಾರ್ಮಿಕ ನಂಬಿಕೆಗೆ ಕನಿಮೊಳಿಯವರ ಹೇಳಿಕೆ ಧಕ್ಕೆ ತಂದಿದೆ ಎಂದು ದೂರುದಾರರಾದ ಕರುಣಾಸಾಗರ್‌ ದೂರಿನಲ್ಲಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry