ಚೀನಾ ಶಕ್ತಿಶಾಲಿ ರಾಷ್ಟ್ರ, ಭಾರತ ದುರ್ಬಲವಾಗಿಲ್ಲ : ಜನರಲ್‌ ರಾವತ್‌

7

ಚೀನಾ ಶಕ್ತಿಶಾಲಿ ರಾಷ್ಟ್ರ, ಭಾರತ ದುರ್ಬಲವಾಗಿಲ್ಲ : ಜನರಲ್‌ ರಾವತ್‌

Published:
Updated:
ಚೀನಾ ಶಕ್ತಿಶಾಲಿ ರಾಷ್ಟ್ರ, ಭಾರತ ದುರ್ಬಲವಾಗಿಲ್ಲ : ಜನರಲ್‌ ರಾವತ್‌

ನವದೆಹಲಿ :ದೇಶದ ಭೂಪ್ರದೇಶವನ್ನು ಅತಿಕ್ರಮಿಸಲು ಭಾರತ ಬಿಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿದ್ದಾರೆ.

‘ಚೀನಾವನ್ನು ಎದುರಿಸುವ ಸಾಮರ್ಥ್ಯ ಭಾರತಕ್ಕಿದ್ದು, ದೇಶದ ಉತ್ತರ ಗಡಿಭಾಗದ ಮೇಲೆ ಭಾರತವು ಕೇಂದ್ರೀಕರಿಸುವ ಸಮಯ ಹತ್ತಿರ

ವಾಗಿದೆ. ಈ ಭಾಗದಲ್ಲಿ ಚೀನಾದ ಅತಿಕ್ರಮಣ ಯತ್ನ ಹೆಚ್ಚಾಗುತ್ತಿದ್ದು, ಭಾರತದ ಸೈನಿಕರು ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ಅವರು ತಿಳಿಸಿದರು.

‘ಚೀನಾವು ಶಕ್ತಿಶಾಲಿ ರಾಷ್ಟ್ರವಾಗಿದ್ದು, ಭಾರತವೂ ದುರ್ಬಲವಾಗಿಲ್ಲ’ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಭಾರತದ ಭೂಭಾಗದ ಮೇಲೆ ಚೀನಾವು ಅತಿಕ್ರಮಣ ಮಾಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ಭೂಭಾಗವನ್ನು ಅತಿಕ್ರಮಿಸಲು ಯಾರಿಗೂ ಬಿಡುವುದಿಲ್ಲ’ ಎಂದು ತಿಳಿಸಿದರು.

ಭಯೋತ್ಪಾದನೆಯನ್ನು ಬಗ್ಗು ಬಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಅಮೆರಿಕವು ನೀಡಿರುವ ಎಚ್ಚರಿಕೆ ನೀಡಿರುವ ವಿಚಾರವಾಗಿ ಭಾರತವು ಕಾದು ನೋಡಿ ಅದರ ಪರಿಣಾಮಗಳನ್ನು ನಿಗಾ ವಹಿಸಲಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry