ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ ಹಾಪ್‌ಕಾಮ್ಸ್‌ ಮೇಳ ಆರಂಭ

ತರಕಾರಿ, ಹಣ್ಣುಗಳ ಬೆಲೆಯಲ್ಲಿ ಗ್ರಾಹಕರಿಗೆ ಶೇಕಡ 15ರವರೆಗೆ ರಿಯಾಯಿತಿ
Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಜನರಿಗೆ ಸಂಕ್ರಾಂತಿ ಪ್ರಯುಕ್ತ ತಾಜಾ ತರಕಾರಿ, ಹಣ್ಣುಹಂಪಲು, ಕಬ್ಬು, ಎಳ್ಳುಬೆಲ್ಲ, ಗೆಣಸು, ಕಡಲೆಕಾಯಿಯನ್ನು ರಿಯಾಯಿತಿ ದರದಲ್ಲಿ ಒದಗಿಸಲು ಹಾಪ್‌ಕಾಮ್ಸ್‌ ವತಿಯಿಂದ ನಾಲ್ಕು ದಿನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಲಾಲ್‌ಬಾಗ್‌ನಲ್ಲಿ ಶುಕ್ರವಾರ ಆರಂಭವಾಯಿತು.

ಗಾಜಿನಮನೆ ಮುಂಭಾಗದಲ್ಲಿರುವ 20 ಮಳಿಗೆಗಳಲ್ಲಿ ತರೇಹವಾರಿ ತರಕಾರಿ ಮತ್ತು ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದೆ. ಬೆಳಿಗ್ಗೆ 5.30ರಿಂದ ಸಂಜೆ 7ರವರೆಗೆ ಜನರು ವೀಕ್ಷಣೆ ಮತ್ತು ಖರೀದಿ ಮಾಡಬಹುದು.

ಎಲ್ಲ ಪದಾರ್ಥಗಳಿಗೂ ಶೇ 10ರಿಂದ ಶೇ 15ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ಮೊದಲ ದಿನದ ಮೇಳದಲ್ಲಿ ಕಡಲೆಕಾಯಿ, ಗೆಣಸು, ಅವರೆಕಾಯಿ, ಕಬ್ಬಿನ ಜಲ್ಲೆ ಖರೀದಿ ಭರಾಟೆಯಿಂದ ನಡೆಯಿತು. ಸ್ವಾದಿಷ್ಟ ಕಬ್ಬಿನ ಹಾಲು, ತಾಜಾ ಹಣ್ಣುಗಳ ರುಚಿ ಸವಿಯಲು ಮೇಳಕ್ಕೆ ಬಂದವರು ಮುಗಿಬಿದ್ದರು.

ಕ್ರಿಸ್‌ಮಸ್‌ನಲ್ಲಿ ನಡೆದಿದ್ದ ಮೇಳದಲ್ಲಿ ₹13 ಲಕ್ಷ ವಹಿವಾಟು ನಡೆದಿತ್ತು. ಈ ಮೇಳಕ್ಕೆ ಸುಮಾರು 50,000 ಜನರು ಭೇಟಿ ನೀಡುವ ನಿರೀಕ್ಷೆ ಇದೆ. ಸುಮಾರು ₹15 ಲಕ್ಷ ವಹಿವಾಟು ನಡೆಸುವ ಗುರಿ ಇದೆ ಎಂದು ಹಾಪ್‌ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ವಿಶ್ವನಾಥ್‌ ತಿಳಿಸಿದರು.

ಪ್ರತಿ ವಾರ ಉದ್ಯಾನದಲ್ಲಿ ಮೇಳ ನಡೆಸುವಂತೆ ವಾರ್ಡ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಬೇಡಿಕೆ ಇಟ್ಟಿವೆ. ಸದ್ಯಕ್ಕೆ ಎರಡನೇ ಶನಿವಾರ, ಒಂದು ಭಾನುವಾರ ಮತ್ತು ಒಂದು ಶುಕ್ರವಾರ ಮೇಳ ನಡೆಸುವ ಚಿಂತನೆ ಇದೆ ಎಂದರು.

ಮೇಳಕ್ಕೆ ಬರುವವರಿಗೆ ಅರಿವು ಮೂಡಿಸಲು ಔಷಧೀಯ ಮತ್ತು ಸುಗಂಧ ಸಸ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 31 ಬಗೆಯ ಅಪರೂಪದ ಸಸ್ಯಗಳು ಇಲಾಖೆಯ ಹುಳಿಮಾವು ಜೈವಿಕ ಕೇಂದ್ರದಲ್ಲಿ ದೊರೆಯಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT