ಕಾಂಗ್ರೆಸ್ ನಡೆಸುತ್ತಿರುವುದು ಉದ್ರಿ ಸರ್ಕಾರ !

7

ಕಾಂಗ್ರೆಸ್ ನಡೆಸುತ್ತಿರುವುದು ಉದ್ರಿ ಸರ್ಕಾರ !

Published:
Updated:
ಕಾಂಗ್ರೆಸ್ ನಡೆಸುತ್ತಿರುವುದು ಉದ್ರಿ ಸರ್ಕಾರ !

ಶಿವಮೊಗ್ಗ: ರಾಜ್ಯ ಸರ್ಕಾರ ವಿವಿಧ ಯೋಜನೆ ರೂಪಿಸಿದೆ. ಹಲವು ಭಾಗ್ಯ ಕರುಣಿಸಿದೆ. ಆದರೆ, ಯಾವುದಕ್ಕೂ ಸಮರ್ಪಕವಾಗಿ ಹಣ ನೀಡುವುದಿಲ್ಲ. ಇದು ಒಂದು ರೀತಿ ಉದ್ರಿ ಸರ್ಕಾರ ಎಂದು ಸೊರಬ ಶಾಸಕ ಮಧು ಬಂಗಾರಪ್ಪ ಟೀಕಿಸಿದರು. ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಕರ್ತರ ಜತೆಗಿನ ಸಂವಾದ ಕಾರ್ಯಕ್ರಮಗಳಲ್ಲಿ ಅವರು ಮಾತನಾಡಿದರು.

ಕ್ಷೇತ್ರದ ಎಲ್ಲ ಹಳ್ಳಿಗಳಿಗೂ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಸೂರು ರಹಿತರಿಗೆ ಮನೆ ಒದಗಿಸಲಾಗಿದೆ. ಬಗರ್‌ಹುಕುಂ ಸಾಗುವಳಿದಾರರಿಗೆ ರಾಜ್ಯದಲ್ಲೇ ಹೆಚ್ಚು ಹಕ್ಕುಪತ್ರ ವಿತರಿಸಲಾಗಿದೆ. ಅರಣ್ಯ ಹಕ್ಕು ಕಾಯ್ದೆಯ ಅಡಿ ಹೆಚ್ಚಿನ ಜನರಿಗೆ ಸಾಗುವಳಿ ಹಕ್ಕು ಕೊಡಿಸಲು ಸಾಧ್ಯವಾಗದಿದ್ದರೂ, ಅರ್ಜಿಗಳನ್ನು ತಿರಸ್ಕರಿಸದಂತೆ ತಡೆಯಲಾಗಿದೆ ಎಂದು ವಿವರ ನೀಡಿದರು.

ಕೆರೆ ಹೂಳು ತೆಗೆಯಲು ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ₹ 1 ಕೋಟಿ ನೀಡಲಾಗಿದೆ. 5 ಕೆರೆ ಇದ್ದ ಕ್ಷೇತ್ರಕ್ಕೂ, 1,500 ಕೆರೆ ಇರುವ ಸೊರಬಕ್ಕೂ ವ್ಯತ್ಯಾಸ ವಿಲ್ಲವೇ? ಆದರೂ, ಸಿಕ್ಕ ಅನುದಾನವನ್ನೇ ಸದ್ಬಳಕೆ ಮಾಡಿಕೊಂಡು ಭ್ರಷ್ಟಾಚಾರಕ್ಕೆ ಅವಕಾಶ ನೀಡದೇ ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದರು.

ನಾಯಕ ನಾಗಿ ಬೆಳೆಯಲು ತಂದೆ ಎಸ್. ಬಂಗಾರಪ ಅವರೇ ಕಾರಣ. ತಂದೆ ಕೊನೆಯ ಕ್ಷಣದಲ್ಲಿ ಜೆಡಿಎಸ್ ಸೇರುವ ನಿರ್ಧಾರ ತೆಗೆದುಕೊಂಡದ್ದು ನನ್ನ ಅದೃಷ್ಟ. ಇಲ್ಲದಿದ್ದರೆ ರಾಜಕೀಯ ಅವಕಾಶವನ್ನೇ ಕಳೆದುಕೊಳ್ಳುವ ಸಾಧ್ಯತೆ ಇತ್ತು. ಅವರು ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಆದರೆ, ಅವರ ಸಿದ್ಧಾಂತ, ಕಾಳಜಿಗಳು ಈಗಲೂ ದಾರಿದೀಪವಾಗಿವೆ. ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಮಾಡಲು ಸರ್ಕಾರದ ಅನುದಾನ, ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಸಹಕಾರ ಇದೆ ಎಂದು ಸ್ಮರಿಸಿದರು.

ಬಿಜೆಪಿಗೆ ಕೋಮುವಾದವೇ ಬಂಡವಾಳ: ಸೊರಬ ಕ್ಷೇತ್ರದಲ್ಲಿ ಸೌಹಾರ್ದದ ವಾತಾವರಣವಿದೆ. ಇತರೆ ಭಾಗಗಳಲ್ಲಿ ಇದ್ದಂತೆ ಕೋಮು ಗಲಭೆಗೆ ಅವಕಾಶ ಇಲ್ಲ. ಬಿಜೆಪಿ ಈಗ ಹತಾಶ ಸ್ಥಿತಿ ತಲುಪಿದ್ದು, ಮತ್ತೆ ಕೋಮುವಾದ ಮುಂದಿಟ್ಟುಕೊಂಡು ಸಮಾಜದ ಸಾಮರಸ್ಯ ಹಾಳುಮಾಡಿ, ಚುನಾವಣೆ ಲಾಭ ಪಡೆಯಲು ಹೊರಟಿದೆ ಎಂದು ಆರೋಪಿಸಿದರು.

ಬಿಜೆಪಿ, ಕಾಂಗ್ರೆಸ್‌ನಿಂದ ಜೆಡಿಎಸ್ ಸಮಾನ ಅಂತರ ಕಾಯ್ದುಕೊಂಡಿದೆ. ಎರಡೂ ಪಕ್ಷಗಳು ಜನರನ್ನು ಮೋಸಗೊಳಿಸುತ್ತಿವೆ. ಕಾಂಗ್ರೆಸ್ ಆಮಿಷದ ರಾಜಕಾರಣ ಮಾಡುತ್ತಿದೆ. ಈ ಎರಡೂ ಪಕ್ಷಗಳಿಗಿಂತ ಭಿನ್ನವಾಗಿ ಜೆಡಿಎಸ್ ಕೆಲಸ ಮಾಡುತ್ತಿದೆ. ಆದರೂ, ಈ ಎರಡೂ ಪಕ್ಷಗಳು ಜೆಡಿಎಸ್‌ಗೆ ಜೋಕರ್ ಸ್ಥಾನ ನೀಡಿವೆ. ಈ ಬಾರಿಯ ಚುನಾವಣೆಯಲ್ಲಿ ಯಾರು ಜೋಕರ್ ಎಂಬುದನ್ನು ಜನರು ಸಾಬೀತು ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.

ಸಹೋದರ ಕುಮಾರ್ ಬಂಗಾರಪ್ಪ ಜತೆಗಿನದು ದಾಯಾದಿ ಜಗಳವಲ್ಲ, ಮನೆತನ ಒಡೆಯುವ ಪಕ್ಷಕ್ಕೆ ಸೇರಿದ ತಕ್ಷಣ ಅವರು ತಾವೇನು ಎಂಬ ಸಂದೇಶ

ಅವರೇ ನೀಡಿದ್ದಾರೆ ಎಂದು ಟೀಕಿಸಿದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ಶಿ.ವಿ. ಸಿದ್ದಪ್ಪ ಉಪಸ್ಥಿತರಿದ್ದರು.

ಗೀತಾಕ್ಕ ಕಾಂಗ್ರೆಸ್ ಸೇರುವುದಿಲ್ಲ: ಮಧು 

ಶಿವರಾಜ್‌ಕುಮಾರ್ ಹಾಗೂ ಗೀತಾ ಶಿವರಾಜ್‌ಕುಮಾರ್ ಕಾಂಗ್ರೆಸ್ ಸೇರುವ ಸುದ್ದಿ ಸತ್ಯಕ್ಕೆ ದೂರ ಎಂದು ಮಧುಬಂಗಾರಪ್ಪ ಸ್ಪಷ್ಟಪಡಿಸಿದರು. ಕಳೆದ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದ್ದು ಗೀತಕ್ಕ ಅವರೇ.

ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ತಮ್ಮ ತಾಯಿಯನ್ನು ಕಣಕ್ಕೆ ಇಳಿಸಬೇಕು ಎನ್ನುವುದು ಕಾರ್ಯಕರ್ತರ ಅಭಿಲಾಷೆಯಾಗಿತ್ತು. ಆದರೆ, ಅವರಿಗೆ ಆರೋಗ್ಯದ ಸಮಸ್ಯೆ ಇದ್ದ ಕಾರಣ ಗೀತಕ್ಕೆ ತಂದೆ ಸ್ಥಾನ ತುಂಬಲು ನಿರ್ಧರಿಸಿದ್ದರು ಎಂದು ಗತ ಘಟನೆ ಮೆಲುಕು ಹಾಕಿದರು. ಅಕ್ಕ ರಾಜಕೀಯದಲ್ಲೇ ಮುಂದುವರಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry