ಕೇಂದ್ರದ ಅಕ್ಕಿ ಸಿದ್ದಣ್ಣನ ಜಾತ್ರೆಗೆ: ವ್ಯಂಗ್ಯ

7

ಕೇಂದ್ರದ ಅಕ್ಕಿ ಸಿದ್ದಣ್ಣನ ಜಾತ್ರೆಗೆ: ವ್ಯಂಗ್ಯ

Published:
Updated:

ಉಡುಪಿ: ‘ಕೇಂದ್ರ ಸರ್ಕಾರ ದುಬಾರಿ ಬೆಲೆ ನೀಡಿ ಪಡಿತರ ಅಕ್ಕಿಯನ್ನು ಖರೀದಿಸಿ ನೀಡುತ್ತಿದೆ. ಆದರೆ ಆಹಾರ ಪ್ಯಾಕೇಟ್‌ನಲ್ಲಿ ಕೇವಲ ಸಿದ್ದರಾಮಯ್ಯ ಅವರ ಭಾವ ಚಿತ್ರವನ್ನು ಹಾಕಲಾಗುತ್ತಿದೆ. ಒಟ್ಟಿನಲ್ಲಿ ಮೋದಿ ದುಡ್ಡಿನಲ್ಲಿ ಸಿದ್ದಣ್ಣ ಜಾತ್ರೆ ಮಾಡುತ್ತಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ವ್ಯಂಗವಾಡಿದರು. ಸ್ವಾಮಿ ವಿವೇಕನಂದ ಜಯಂತಿ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ಮಾಡಿಫೈಯಿಂಗ್‌’ ಕರ್ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಡ್ಡಿಯೂರಪ್ಪ ಅವರ ಆಡಳಿತವನ್ನು ಜನರು ಇಂದಿಗೂ ನೆನಪಿಸುತ್ತಾರೆ. ಭಾಗ್ಯಲಕ್ಷ್ಮೀ, ಬಸವ ವಸತಿ, ನಮ್ಮ ಮನೆ ನಮ್ಮ ಗ್ರಾಮಗಳಂತಹ ಯೋಜನೆಗಳು ಇದಕ್ಕೆ ಸಾಕ್ಷಿ. ಆದರೆ ಸಿದ್ದರಾಮಯ್ಯ ಅವರನ್ನು ಟಿಪ್ಪು ಜಯಂತಿ ಹಾಗೂ ಉಢಾಫೆ ಉತ್ತರದಿಂದ ಜನರು ಗುರುತಿಸುತ್ತಾರೆ. ಸಾಧನೆಗಳನ್ನು ನೋಡಬೇಕಾದರೆ ಗೋವಿಂದರಾಜ್ ಡೈರಿಯನ್ನು ನೋಡಿದರೆ ತಿಳಿಯುತ್ತದೆ. ಯಾರಿಗೆ ಎಷ್ಟು ಕಪ್ಪ ಕಾಣಿಕೆ ನೀಡಿದ್ದಾರೆ ಎನ್ನುವ ಸತ್ಯ ಗೊತ್ತಾಗುತ್ತದೆ. ಜೈಲಿಗೆ ಹೋದವರು ಎಂದು ಯಡಿಯೂರಪ್ಪ ಅವರನ್ನು ಟೀಕಿಸುತ್ತಾರೆ, ಇಂದಿರಾಗಾಂಧಿ ಅವರು ಅರಮನೆಗೆ ಹೋಗಿದ್ದರೆ ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ನಂತರ ಆರ್ಥಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರುವಂತಾಗಬೇಕು. ಆ ಮೂಲಕ 2019 ಚುನಾವಣೆಗೆ ಕೇಂದ್ರ ಸರ್ಕಾರ ಆಸ್ತಿತ್ವಕ್ಕೆ ಕರ್ನಾಟಕ ಕೊಡುಗೆಯನ್ನು ನೀಡಬೇಕು ಎಂದರು.

ಬಿಜೆಪಿ ವಕ್ತಾರ ತಜೇಂದ್ರ ಪಾಲ್ ಸಿಂಗ್ ಮಾತನಾಡಿ, ಪ್ರಧಾನಿ ಮೋದಿ ಕೇಂದ್ರದಲ್ಲಿ ಆಡಳಿತ ಆರಂಭವಾದ ನಂತರ ದೇಶ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ದೇಶ ದ್ರೋಹಿ ಚಟುವಟಿಕೆಯಲ್ಲಿ ಗುರುತಿಕೊಂಡವರೊಂದಿಗೆ ರಾಹುಲ್ ಗಾಂಧಿ ಗುರುತಿಕೊಳ್ಳುತ್ತಿದ್ದಾರೆ. ರಾಜ್ಯ ವಿಕಾಸದ ಹಾದಿಯನ್ನು ತುಳಿಯ ಬೇಕಾದರೆ ಮೋದಿ ಬೆಂಬಲವನ್ನು ನೀಡ ಬೇಕು ಎಂದರು.

* * 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮೈಸೂರು ಜನರು ಮೂರೂವರೆ ವರ್ಷಗಳ ಹಿಂದೆ ತಿರಸ್ಕೃರಿಸಿದ್ದಾರೆ. ಅವರೀಗ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ಗೊಂದಲದಲ್ಲಿದ್ದಾರೆ.

ಪ್ರತಾಪ ಸಿಂಹ,

ಸಂಸದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry