ಕಾನೂನು ಸುವ್ಯವಸ್ಥೆ ಕಾಪಾಡಲು ಸಲಹೆ

7

ಕಾನೂನು ಸುವ್ಯವಸ್ಥೆ ಕಾಪಾಡಲು ಸಲಹೆ

Published:
Updated:

ಕಕ್ಕೇರಾ: ಪಟ್ಟಣದ ಸೋಮನಾಥ ದೇವರ ಜಾತ್ರೆ ಜ.13ರಿಂದ 23ರವರೆಗೆ ನಡೆಯಲಿದ್ದು, ಜಾತ್ರೆಯಲ್ಲಿ ಶಾಂತಿಸುವ್ಯವಸ್ಥೆ ಕಾಪಾಡಲು ಪೊಲೀಸ ರೊಂದಿಗೆ ಪಟ್ಟಣದ ವಿವಿಧ ಸಂಘ–ಸಂಸ್ಥೆ ಪದಾಧಿಕಾರಿಗಳು ಹಾಗೂ ನಾಗರಿಕರ ಸಹಕಾರ ಅಗತ್ಯ’ ಎಂದು ಸಿಪಿಐ ಪಂಡಿತ್ ಸಾಗರ ಹೇಳಿದರು.

ಪಟ್ಟಣದ ಉಪ ಪೊಲೀಸ್ ಠಾಣೆಯಲ್ಲಿ ಈಚೆಗೆ ನಡೆದ ಸೋಮನಾಥ ಜಾತ್ರೆ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ‘ಗಂಗಾಸ್ಥಳದಲ್ಲಿ ದೇವರ ಹೇಳಿಕೆ ಹಾಗೂ ನದಿಯಿಂದ ದೇವಸ್ಥಾನದವರೆಗೆ ದೇವರು ಬರುವ ಸಂದರ್ಭ ಪೊಲೀಸರನ್ನು ನಿಯೋಜಿಸಲಾಗುವುದು. ಮರುದಿನ ವೈಭವದ ಬ್ರಹ್ಮ ರಥೋತ್ಸವ ಜರುಗುವ ಸಂದರ್ಭ ದಲ್ಲಿ ಹಾಗೂ ದೇವಸ್ಥಾನ ಸುತ್ತಮುತ್ತ ಮತ್ತು ಪ್ರಮುಖ ವೃತ್ತಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುವುದು.

ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಸಂಚಾರ ಸಮಸ್ಯೆ ತಡೆಯಲು ವಾಲ್ಮೀಕಿ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಲಾಗುವುದು. ಅಂಗಡಿ ಗಳಿಂದ ಹಣಕ್ಕಾಗಿ ಪೀಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಜಾತ್ರೋತ್ಸವದಲ್ಲಿ ಸ್ವಯಂಸೇವಕರನ್ನು ನೇಮಿಸಬೇಕು’ ಎಂದು ತಿಳಿಸಿದರು.

ಪಿಎಸ್‌ಐ ಅರ್ಜುನ ಹೊಸಕೇರಿ, ಎಎಸ್‌ಐ ಶ್ಯಾಮಸುಂದರನಾಯಕ್, ಪ್ರಮುಖರಾದ ರಾಜು ಹವಾಲ್ದಾರ, ನಂದಣ್ಣ ದೇಸಾಯಿ, ಗುಂಡಪ್ಪ ಸೊಲ್ಲಾಪುರ, ನಿಂಗಯ್ಯ ಬೂದಗುಂಪಿ, ಭೀಮನಗೌಡ ಹಳ್ಳಿ, ಲಕ್ಷ್ಮಣ ಲಿಂಗದಳ್ಳಿ, ಶರಣಕುಮಾರ ಸೊಲ್ಲಾಪುರ, ಚಂದ್ರ ಶೇಖರ ವಜ್ಜಲ, ಆದಯ್ಯ ಗುರಿಕಾರ, ಪರಶುರಾಮ ಚಿಂಚೋಡಿ, ನಂದಣ್ಣ ಗುಮೇದಾರ, ಅಯ್ಯಣ್ಣ ಗುಮೇದಾರ, ಗ್ವಾಲಪ್ಪ ಮಲಕೋಜಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry