ಬಂಡೀಪುರದಲ್ಲಿ 2 ಹುಲಿಗಳ ದರ್ಶನ

7

ಬಂಡೀಪುರದಲ್ಲಿ 2 ಹುಲಿಗಳ ದರ್ಶನ

Published:
Updated:

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ನಡೆಯುತ್ತಿರುವ ಹುಲಿ ಗಣತಿಯಲ್ಲಿ ಶುಕ್ರವಾರ 2 ಹುಲಿ, 2 ಚಿರತೆ ಮತ್ತು 25 ಆನೆಗಳು ಕಾಣಿಸಿಕೊಂಡಿವೆ. ಮೂಲೆಹೊಳೆ ಮತ್ತು ಗುಂಡ್ರೆ ವಲಯದಲ್ಲಿ ತಲಾ ಒಂದು ಹುಲಿಗಳು ಗಣತಿದಾರರ ಕಣ್ಣಿಗೆ ಬಿದ್ದವು. ಕುಂದಕೆರೆ ಮತ್ತು ಎ.ಎಂ. ಗುಡಿ ವಲಯದಲ್ಲಿ ತಲಾ ಒಂದು ಚಿರತೆ ಮತ್ತು ಬಂಡೀಪುರ ವಲಯ, ಮೂಳೆಹೊಳೆ ಮತ್ತು ಮೊಳೆಯೂರುನಲ್ಲಿ ತಲಾ 5, ಎನ್.ಬೇಗೂರು 2 ಹಾಗೂ ಗುಂಡ್ರೆ ವಲಯದಲ್ಲಿ 8 ಆನೆಗಳು ಕಾಣಿಸಿಕೊಂಡಿವೆ.

ಎರಡು ದಿನಗಳಿಂದ 2 ಕಿ.ಮೀ. ವ್ಯಾಪ್ತಿಯ ಟ್ರಾನ್ಸಾಕ್ಟ್‌ ಲೈನ್‌ನಲ್ಲಿ ಗಣತಿ ಮಾಡಲಾಗುತ್ತಿದೆ. ಶನಿವಾರ ಗಣತಿ ಕಾರ್ಯ ಮುಗಿಯಲಿದೆ ಎಂದು ವಲಯ ಅರಣ್ಯಾಧಿಕಾರಿಯೊಬ್ಬರು ತಿಳಿಸಿದರು.

ಬಂಡೀಪುರ ಉದ್ಯಾನ ವ್ಯಾಪ್ತಿಯಲ್ಲಿ 5 ರಿಂದ 8 ಕಿ.ಮೀಗೆ ಒಂದರಂತೆ 120ಕ್ಕೂ ಹೆಚ್ಚು ಹುಲಿಗಳಿವೆ, ಆದರೆ ಬೆಳಗಿನ ಸಂದರ್ಭದಲ್ಲಿ ಮಾತ್ರ ಗಣತಿ ಮಾಡುತ್ತಿರುವುದರಿಂದ ಹೆಚ್ಚು ಕಾಣಿಸಿ ಕೊಳ್ಳುತ್ತಿಲ್ಲ. ಕಾಡಿನಲ್ಲಿರುವ ಕಟ್ಟೆಗಳಿಗೆ ನೀರು ಕುಡಿಯಲು ಬರುವುದರಿಂದ ಸಂಜೆಯವರೆಗೂ ಗಣತಿ ಮಾಡಿದ್ದರೆ ಹೆಚ್ಚು ಹುಲಿಗಳು ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry