ಮಾಲೇಕಲ್‌ ದೇವಸ್ಥಾನಕ್ಕೆ ನ್ಯಾ.ಎಸ್‌.ಆರ್‌.ನಾಯಕ ಭೇಟಿ

7

ಮಾಲೇಕಲ್‌ ದೇವಸ್ಥಾನಕ್ಕೆ ನ್ಯಾ.ಎಸ್‌.ಆರ್‌.ನಾಯಕ ಭೇಟಿ

Published:
Updated:

ಅರಸೀಕೆರೆ: ಕಾನೂನು ಸೇವಾ ಆಯೋ ಗದ ಅಧ್ಯಕ್ಷ ಎಸ್‌.ಆರ್‌.ನಾಯಕ್‌ ಅವರು ಶುಕ್ರವಾರ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಅಮರಗಿರಿ ಮಾಲೇಕಲ್‌ ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು.

ಅರಸೀಕೆರೆ: ಕಾನೂನು ಸೇವಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ.ಎಸ್‌.ಆರ್‌. ನಾಯಕ್‌ ಅವರು ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಅಮರಗಿರಿ ಮಾಲೇಕಲ್‌ ತಿರುಪತಿ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು.

ದೇವಾಲಯದ ಪ್ರಧಾನ ಅರ್ಚಕ ರಾಮಪ್ರಸಾದ್‌ ಎಸ್‌.ಆರ್‌.ನಾಯಕ್‌ ಅವರನ್ನು ದೇವಾಲಯದ ವತಿಯಿಂದ ಫಲಪುಷ್ಪ ಹಾಗೂ ವಸ್ತ್ರ ನೀಡಿ ಗೌರವಿಸಿದರು. ತಹಶೀಲ್ದಾರ್‌ ಹಾಗೂ ಮುಜಿರಾಯಿ ಇಲಾಖೆ ಅಧಿಕಾರಿ ಎನ್‌.ವಿ. ನಟೇಶ್‌ ವಕೀಲ ಸರ್ವೇಶ್‌ ಉಪಸ್ಥಿತರಿದ್ದರು.

ಇಂದು ಮಧ್ಯಾಹ್ನ ನಗರದ ಜೆ.ಎಂ.ಎಫ್‌.ಸಿ ನ್ಯಾಯಾಲಯದಲ್ಲಿ ವಕೀಲರ ಸಂಘ ಆಯೋಜಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು ಕ್ಷೇತ್ರಕ್ಕೆ ಬಂದು ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry