ಲಾಭದಲ್ಲಿ ಹಾಲು ಉತ್ಪಾದಕರ ಸಂಘ

7

ಲಾಭದಲ್ಲಿ ಹಾಲು ಉತ್ಪಾದಕರ ಸಂಘ

Published:
Updated:

ಕೊಣನೂರು: ಅರಕಲಗೂಡು ತಾಲ್ಲೂಕಿ ನಲ್ಲಿರುವ 54 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಲಾಭದಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್ ಹೇಳಿದರು.

ಹೋಬಳಿಯ ರಂಗನಾಥಪುದರಲ್ಲಿ ಶುಕ್ರವಾರ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಳೆ ವ್ಯತ್ಯಯದಿಂದಾಗಿ ಬೆಳೆಗಳಲ್ಲಿ ಏರುಪೇರಾಗಿ ರೈತರು ಕಷ್ಟಪಡುತ್ತಿರುವ ಸಂದರ್ಭದಲ್ಲಿ, ಹೈನುಗಾರಿಕೆಯು ಅನೇಕ ರೈತರ ಬದುಕನ್ನು ಕಟ್ಟಿಕೊಡು ವಲ್ಲಿ ಯಶಸ್ವಿಯಾಗಿದೆ ಎಂದರು.

ಹಾಸನ ಕೆಎಂಎಫ್ ವ್ಯವಸ್ಥಾಪಕ ಜಯಪ್ರಕಾಶ್ ಮಾತನಾಡಿದರು. ತಾ.ಪಂ ಸದಸ್ಯ ಸೂರೇಗೌಡ, ಅಧಿಕಾರಿ ಗಂಗಾಧರ್, ಮುಖಂಡ ಹೊಸನಗರ ಕೇಶವೇಗೌಡ, ಉಪನ್ಯಾಸಕ ಯಧುಕುಮಾರ್, ಗ್ರಾಮಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry