ಅನುದಾನ ದುರ್ಬಳಕೆ: ಆರೋಪ

7

ಅನುದಾನ ದುರ್ಬಳಕೆ: ಆರೋಪ

Published:
Updated:

ಕುಷ್ಟಗಿ: ತಾಲ್ಲೂಕಿನ ಮುದೇನೂರು ಗ್ರಾಮ ಪಂಚಾಯಿತಿಯಲ್ಲಿ 2015 ರಿಂದ 2018ರ ಅವಧಿಯಲ್ಲಿ ವಿವಿಧ ಯೋಜನೆಯಲ್ಲಿ ಅನುದಾನ ದುರ್ಬಳಕೆಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಹುಸೇನಪ್ಪ ಮುದೇನೂರು ಮತ್ತು ನಾಗರಾಜ ನಂದಾಪುರ ದೂರಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಶುಕ್ರವಾರ ದೂರು ನೀಡಿರುವ ಅವರು, ಕರ್ತವ್ಯಲೋಪ ಆರೋಪದ ಮೇಲೆ ಅಭಿವೃದ್ಧಿ ಅಧಿಕಾರಿ ಬಸವರಾಜ ಸಂಕನಾಳ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದರು.

‘ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಶೌಚಾಲಯಗಳು ನಿರ್ಮಾಣಗೊಳ್ಳದಿದ್ದರೂ ಫಲಾನುಭವಿಗಳ ಹೆಸರಿನಲ್ಲಿ ಅನುದಾನ ಖರ್ಚು ಮಾಡಲಾಗಿದೆ. 14ನೇ ಹಣಕಾಸು ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ’ ಎಂದು ಅವರು ಆರೋಪಿಸಿದರು.

ತಾವರಗೇರಾ : ಪಟ್ಟಣದ 1 ನೇ ವಾರ್ಡ್‌ನಲ್ಲಿ ಗುರುವಾರ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗಾಗಿ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿದರು.

ಎಲ್ಲಾ ವಾರ್ಡಗಳ ಮತದಾರರ ಪಟ್ಟಿಯ ಪರಿಷ್ಕರಣೆಗೆ ಅವಕಾಶವಿರುವ ಹಿನ್ನೆಲೆಯಲ್ಲಿ ಬೂತ ಮಟ್ಟದ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಮನೆ ಮನೆ ಬೇಟಿ ಮಾಡಿದರು. 1 ನೇ ವಾರ್ಡ್‌ನಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಪಟ್ಟಿ ತಿದ್ದುಪಡ್ಡಿ, ಹೆಸರು ಸೇರ್ಪಡೆ ಅರ್ಜಿಗಳನ್ನು ನೀಡಿದರು.

ನಾಡ ತಹಶಿಲ್ದಾರ ಹಸನಸಾಬ ಗುಳೆದಗುಡ್ಡ , ಕೆ.ಮಲ್ಲಿಕಾರ್ಜುನ, ಸೂರ್ಯಕಾಂತ ದೇಸಾಯಿ, ಕಂದಾಯ ಇಲಾಖೆಯ ಸಿಬ್ಬಂದಿಗಳು, ಬೂತ ಮಟ್ಟದ ಅಧಿಕಾರಿಗಳಾದ ಪರಸಪ್ಪ ಹೊಸಮನಿ. ಹನಮಂತಸಾ ವಾಲೆಕಾರ, ಶ್ಯಾಮಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry