ಬಿಜೆಪಿ ಪರಿವರ್ತನಾ ಯಾತ್ರೆಗೆ ಜನ ಸೇರಿಸಲು ಶ್ರೀನಿವಾಸಪುರದಲ್ಲಿ ಹೊಸ ಬಟ್ಟೆಯ ಟೋಕನ್‌ ವಿತರಣೆ

7

ಬಿಜೆಪಿ ಪರಿವರ್ತನಾ ಯಾತ್ರೆಗೆ ಜನ ಸೇರಿಸಲು ಶ್ರೀನಿವಾಸಪುರದಲ್ಲಿ ಹೊಸ ಬಟ್ಟೆಯ ಟೋಕನ್‌ ವಿತರಣೆ

Published:
Updated:
ಬಿಜೆಪಿ ಪರಿವರ್ತನಾ ಯಾತ್ರೆಗೆ ಜನ ಸೇರಿಸಲು ಶ್ರೀನಿವಾಸಪುರದಲ್ಲಿ ಹೊಸ ಬಟ್ಟೆಯ ಟೋಕನ್‌ ವಿತರಣೆ

ಕೋಲಾರ: ಬಿಜೆಪಿಯ ಪರಿವರ್ತನಾ ಯಾತ್ರೆಯು ಶನಿವಾರ ಜಿಲ್ಲೆಯನ್ನು ಪ್ರವೇಶಿಸಿದ್ದು, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಸಮಾವೇಶಕ್ಕೆ ಜನರನ್ನು ಸೇರಿಸಲು ಮುಖಂಡರು ಹೊಸ ಬಟ್ಟೆಯ ಟೋಕನ್‌ ಹಂಚಿಕೆ ಮಾಡುತ್ತಿದ್ದಾರೆ.

ಮಹಿಳೆಯರಿಗೆ ಸೀರೆ, ಪುರುಷರಿಗೆ ಶರ್ಟ್‌ ಮತ್ತು ಪ್ಯಾಂಟ್‌ನ ಆಮಿಷವೊಡ್ಡಿ ಸಮಾವೇಶಕ್ಕೆ ಕರೆತರಲಾಗಿದೆ. ವಿವೇಕಾನಂದ ವೃತ್ತದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಬಂದ ಜನರಿಗೆ ಮುಖಂಡರು ಟೋಕನ್‌ ವಿತರಣೆ ಮಾಡುತ್ತಿದ್ದಾರೆ. ಸಮಾವೇಶದ ಬಳಿಕ ಟೋಕನ್‌ ಹಿಂಪಡೆದು ಹೊಸ ಬಟ್ಟೆ ವಿತರಿಸುವುದಾಗಿ ಮುಖಂಡರು ಜನರಿಗೆ ಭರವಸೆ ನೀಡಿದ್ದಾರೆ.

ಜಿಲ್ಲೆಯ ಬಂಗಾರಪೇಟೆ, ಕೋಲಾರ, ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ಇಡೀ ದಿನ ಯಾತ್ರೆ ನಡೆಯಲಿದೆ. ಕೆಜಿಎಫ್‌ ಹಾಗೂ ಮಾಲೂರು ಕ್ಷೇತ್ರದಲ್ಲಿ ಭಾನುವಾರ (ಜ.14) ಯಾತ್ರೆ ಆಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry