ಐಪಿಎಲ್‌ ಹರಾಜು ಪ್ರಕ್ರಿಯೆಗೆ 1122 ಆಟಗಾರರ ನೋಂದಣಿ

7

ಐಪಿಎಲ್‌ ಹರಾಜು ಪ್ರಕ್ರಿಯೆಗೆ 1122 ಆಟಗಾರರ ನೋಂದಣಿ

Published:
Updated:
ಐಪಿಎಲ್‌ ಹರಾಜು ಪ್ರಕ್ರಿಯೆಗೆ 1122 ಆಟಗಾರರ ನೋಂದಣಿ

ನವದೆಹಲಿ: ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್, ಯುವರಾಜ್‌ ಸಿಂಗ್‌, ಶೇನ್‌ ವ್ಯಾಟ್ಸನ್‌, ಜೋ ರೂಟ್ಸ್‌ ಸೇರಿ 1122 ಆಟಗಾರರು ಈ ಸಾಲಿನ ಐಪಿಎಲ್‌ ಟೂರ್ನಿ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಲು ಸಹಿ ಮಾಡಿರುವುದಾಗಿ ಬಿಸಿಸಿಐ ಪ್ರಕಟಿಸಿದೆ.

ಬೆಂಗಳೂರಿನಲ್ಲಿ ಇದೇ 27 ಹಾಗೂ 28ರಂದು 2018ರ ಐಪಿಎಲ್‌ ಟೂರ್ನಿಗೆ ಆಟಗಾರರ ಆಯ್ಕೆ ಮಾಡಲು ಹರಾಜು ಪ್ರಕ್ರಿಯೆ ನಡೆಯಲಿದೆ.  ಭಾರತದ ಗೌತಮ್ ಗಂಭೀರ್‌, ಆರ್‌.ಅಶ್ವಿನ್‌, ಅಜಿಂಕ್ಯಾ ರಹಾನೆ, ಕುಲ್‌ದೀಪ್‌ ಯಾದವ್, ಕೆ.ಎಲ್‌.ರಾಹುಲ್‌ ಹಾಗೂ ಎಂ.ವಿಜಯ್‌ ಸೇರಿ ಹಲವು ಆಟಗಾರರು ಐಪಿಎಲ್‌ ಹರಾಜು ಆಯ್ಕೆಗೆ ಸಹಿ ಮಾಡಿದ್ದಾರೆ.

ಭಾರತದ 778 ಆಟಗಾರರು, ಸಹಭಾಗಿತ್ವ ವಹಿಸಿರುವ ರಾಷ್ಟ್ರಗಳ ಮೂವರು ಆಟಗಾರರು ಸೇರಿ ಒಟ್ಟು 1122 ಕ್ರಿಕೆಟಿಗರ ಪಟ್ಟಿಯನ್ನು ಐಪಿಎಲ್‌ನ ಎಂಟು ಫ್ರಾಂಚೈಸಿಗಳಿಗೆ ಕಳುಹಿಸಲಾಗಿದೆ. 2017ರಲ್ಲಿ 351 ಆಟಗಾರರು ಐಪಿಎಲ್‌ ಟೂರ್ನಿಗಾಗಿ ನೋಂದಾಯಿಸಿಕೊಂಡಿದ್ದರು. 

ಆಸ್ಟ್ರೇಲಿಯಾದ 58, ದಕ್ಷಿಣ ಆಫ್ರಿಕಾದ 57, ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್‌ನಿಂದ ತಲಾ 39, ನ್ಯೂಜಿಲೆಂಡ್‌ನ 30 ಮತ್ತು ಇಂಗ್ಲೆಂಡ್‌ನ 26 ಆಟಗಾರರು ಸೇರಿ 282 ವಿದೇಶಿ ಆಟಗಾರರು ನೋಂದಾಯಿಸಿಕೊಂಡಿದ್ದಾರೆ.

ಬೆನ್‌ ಸ್ಟೋಕ್ಸ್‌, ಕ್ರಿಸ್‌ ಲಿನ್‌, ಇಯಾನ್ ಮಾರ್ಗನ್‌, ಮಿಚೆಲ್‌ ಸ್ಟಾರ್ಕ್‌ , ಗ್ಲೇನ್‌ ಮ್ಯಾಕ್ಸ್‌ವೆಲ್‌, ಮಿಚೆಲ್‌ ಜಾನ್ಸನ್‌, ಇಂಗ್ಲೆಂಡ್‌ ಟೆಸ್ಟ್ ತಂಡದ ನಾಯಕ ಜೋ ರೂಟ್ಸ್‌, ಡ್ವೇನ್‌ ಬ್ರಾವೊ, ಇವಿನ್‌ ಲೆವಿಸ್‌, ಹಶಿಮ್ ಆಮ್ಲ  ಸೇರಿ ಹರಾಜಿನಲ್ಲಿ ಹೆಚ್ಚು ಮೊತ್ತ ಪಡೆಯಬಹುದಾದ ಆಟಗಾರರ ‍ಪಟ್ಟಿಯೂ ಏರಿಕೆಯಾಗಿದೆ.

* ಐಪಿಎಲ್‌ ಹರಾಜು ಪ್ರಕ್ರಿಯೆಗೆ 1122 ಆಟಗಾರರು; ವಿದೇಶಿ ಆಟಗಾರರು 282

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry