ಸಿ.ಎಂ ಪಟ್ಟಕ್ಕೆ ಕುದುರೆಗಳಿರುವಾಗ ಕತ್ತೆಗೇನು ಕೆಲಸ: ಪ್ರಸಾದ್‌ ವ್ಯಂಗ್ಯ

7

ಸಿ.ಎಂ ಪಟ್ಟಕ್ಕೆ ಕುದುರೆಗಳಿರುವಾಗ ಕತ್ತೆಗೇನು ಕೆಲಸ: ಪ್ರಸಾದ್‌ ವ್ಯಂಗ್ಯ

Published:
Updated:
ಸಿ.ಎಂ ಪಟ್ಟಕ್ಕೆ ಕುದುರೆಗಳಿರುವಾಗ ಕತ್ತೆಗೇನು ಕೆಲಸ: ಪ್ರಸಾದ್‌ ವ್ಯಂಗ್ಯ

ಮೈಸೂರು: ‘ಮುಖ್ಯಮಂತ್ರಿ ಆಗಲು ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ ಅವರಂಥ ಕುದುರೆಗಳು ಇರುವಾಗ ಸಿದ್ದರಾಮಯ್ಯ ಅವರು ಡಾ.ಎಚ್.ಸಿ.ಮಹದೇವಪ್ಪ ಅವರಂಥ ಕತ್ತೆಯ ಹೆಸರು ಪ್ರಸ್ತಾಪಿಸಿದ್ದಾರೆ. ಇವರೆಂಥ ಮುಖ್ಯಮಂತ್ರಿ?’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಇಲ್ಲಿ ಶನಿವಾರ ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಹುಲ್ ಗಾಂಧಿಯೇ ಮುಂದಿನ ಪ್ರಧಾನಿ ಎಂದು ಹೇಳುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಮುಖಂಡರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು’ ಎಂದು ಟೀಕಿಸಿದರು.

‘ಆರ್‌ಎಸ್ಎಸ್‌, ಬಜರಂಗದಳದವರು ಉಗ್ರಗಾಮಿಗಳು ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆ ನೀಡುವ ಮೊದಲು ಯೋಚನೆ ಮಾಡಬೇಕು. ಅವರಿಗೆ ವಿವೇಚನೆ ಕೊರತೆ ಇದ್ದು, ಈಚೆಗೆ ಪ್ರಚೋದನಾಕಾರಿ ಹೇಳಿಕೆ ನೀಡಲು ಶುರು ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಆನೆಗಳು ಹೋಗುವಾಗ ನಾಯಿಗಳು ಬೊಗಳುತ್ತವೆ’ ಎಂದು ಕಾಂಗ್ರೆಸ್‌ ಸರ್ಕಾರದ ಸಾಧನಾ ಸಂಭ್ರಮದಲ್ಲಿ ಮಹದೇವಪ್ಪ ಟೀಕಿಸಿರುವುದಕ್ಕೆ ಪ್ರತಿಕ್ರಿಯಿಸಿ, ‘ಯಾರು ಬೊಗಳುತ್ತಾರೆ, ಯಾರು ಆನೆ ರೀತಿ ಇದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಸಿದ್ದರಾಮಯ್ಯ ಆನೆನೋ, ನಾಯಿನೋ ಎಂಬುದು ಜಗಜ್ಜಾಹೀರಾಗಿದೆ. ಮುಂದಿನ ಬಾರಿಯೂ ತಾವೇ ಮುಖ್ಯಮಂತ್ರಿ ಎನ್ನುತ್ತಿದ್ದ ಅವರು ಈಚೆಗೆ ಅಂಥ ಹೇಳಿಕೆ ನೀಡುವುದನ್ನು ನಿಲ್ಲಿಸಿದ್ದಾರೆ’ ಎಂದು ಲೇವಡಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry