3 ದಿನಗಳ ಹಿಂದೆ ಬಾವಿಗೆ ಬಿದ್ದ ವ್ಯಕ್ತಿ ಜೀವಂತ ಪತ್ತೆ

7

3 ದಿನಗಳ ಹಿಂದೆ ಬಾವಿಗೆ ಬಿದ್ದ ವ್ಯಕ್ತಿ ಜೀವಂತ ಪತ್ತೆ

Published:
Updated:
3 ದಿನಗಳ ಹಿಂದೆ ಬಾವಿಗೆ ಬಿದ್ದ ವ್ಯಕ್ತಿ ಜೀವಂತ ಪತ್ತೆ

ತೋವಿನಕೆರೆ (ತುಮಕೂರು): ಆಕಸ್ಮಿಕವಾಗಿ ನೀರಿಲ್ಲದ ಬಾವಿಗೆ ಬಿದ್ದು, ಮೂರು ದಿನಗಳ ನಂತರ ಪತ್ತೆಯಾದ ವ್ಯಕ್ತಿ ಬದುಕುಳಿದಿರುವ ಪ್ರಕರಣ ತೋವಿನಕೆರೆಯಲ್ಲಿ ನಡೆದಿದೆ.

ಗ್ರಾಮದ ಹನುಮಂತರಾಜು ಎಂಬುವರು ಇಲ್ಲಿನ ಸೂರೇನಹಳ್ಳಿಯಲ್ಲಿ ಮೂವತ್ತು ಅಡಿ ಉದ್ದದ ಪಾಳುಬಾವಿಗೆ ಗುರುವಾರ ಆಕಸ್ಮಿಕವಾಗಿ ಬಿದ್ದಿದ್ದರು. ಶನಿವಾರ ಬಾವಿಯಿಂದ ಬಾಯಿ ಬಡಿದು ಕೊಳ್ಳುವ ಶಬ್ದ ಕೇಳಿದ ವ್ಯಕ್ತಿ ಬಗ್ಗಿ ನೋಡಿದಾಗ ಹನುಮಂತರಾಜು ಇರುವುದು ತಿಳಿದು ಬಂದಿದೆ.

ನಂತರ ಸೂರೇನಹಳ್ಳಿ ಗ್ರಾಮದವರಿಗೆ ತಿಳಿಸಿದಾಗ ಅನೇಕರು ತೆರಳಿ ಬಾವಿಯಲ್ಲಿದ್ದ ಹನುಮಂತರಾಜು ಅವರನ್ನು ಮೇಲಕ್ಕೆ ಎತ್ತಿ ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿದರು.

ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry